ಕೆಟ್ಟ ಕಮೆಂಟ್, ಬೆದರಿಕೆಗೆ ನಟಿ ಸೋನಾಕ್ಷಿ ಸಿನ್ಹಾ ಫುಲ್ ಗರಂ

ಶುಕ್ರವಾರ, 21 ಆಗಸ್ಟ್ 2020 (23:56 IST)
ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಟ-ನಟಿಯರ ವಿರುದ್ಧ ಅವಹೇಳನಕಾರಿ ಕಮೆಂಟ್ ಮಾಡುವ ಪ್ರಕರಣ ಮತ್ತೆ ಮರುಕಳಿಸುತ್ತಿವೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಹಾಗೂ ಬೆದರಿಕೆ ಕಮೆಂಟ್ ಗಳು ಬಂದಿವೆ.

 ಅಸಂಬದ್ಧ ಭಾಷೆಯಿಂದ ಕಮೆಂಟ್ ಮಾಡಿದವರ ವಿರುದ್ಧ ನಟಿ ಸೋನಾಕ್ಷಿ ಸಿನ್ಹಾ ಮುಂಬೈ ಸೈಬರ್ ಕ್ರೈಮ್ ಬ್ರ್ಯಾಂಚ್ ಗೆ ನೀಡಿದ ಮಾಹಿತಿ ಮೇರೆಗೆ ಕೇಸ್ ದಾಖಲಾಗಿತ್ತು.

ಕಮೆಂಟ್ ಮಾಡಿದ್ದ ವ್ಯಕ್ತಿ ಶಶಿಕಾಂತ್ ಜಾಧವ್ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ