ಶ್ರೀಮುರಳಿ ಬರ್ತ್ ಡೇಗೆ ಇಂದು ಬಘೀರ ಗಿಫ್ಟ್

ಭಾನುವಾರ, 17 ಡಿಸೆಂಬರ್ 2023 (09:00 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬಕ್ಕೆ ಇಂದು ಅಭಿಮಾನಿಗಳಿಗೆ ಬಘೀರ ಸಿನಿಮಾ ತಂಡದಿಂದು ಉಡುಗೊರೆ ಸಿಗಲಿದೆ.

ಇಂದು ಬೆಳಿಗ್ಗೆ 9.45 ಕ್ಕೆ ಬಘೀರ ಸಿನಿಮಾದ ಟೀಸರ್ ಒಂದನ್ನು ಚಿತ್ರತಂಡ ಹೊರಬಿಡಲಿದೆ. ಈ ಸಿನಿಮಾದ ಅಪ್ ಡೇಟ್ ಗಾಗಿ ಶ್ರೀಮುರಳಿ ಫ್ಯಾನ್ಸ್ ಎಷ್ಟೋ ದಿನದಿಂದ ಕಾಯುತ್ತಿದ್ದಾರೆ.

ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ನಿರ್ಮಾಣದ ಮಾಸ್ ಎಂಟರ್ ಟೈನರ್ ಸಿನಿಮಾವಿದು. ಈ ಸಿನಿಮಾಗೆ ಪ್ರಶಾಂತ್ ನೀಲ್ ಕತೆ ಬರೆದಿರುವುದು ವಿಶೇಷ. ಆದರೆ ನಿರ್ದೇಶನ ಮಾಡಿರುವುದು ಡಾ.ಸೂರಿ.

ಶ್ರೀಮುರಳಿ ಈ ಸಿನಿಮಾದಲ್ಲಿ ವಿಶಿಷ್ಟ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ಒಂದನ್ನು ಚಿತ್ರತಂಡ ಹೊರಬಿಟ್ಟಿತ್ತು. ಇದೀಗ ಟೀಸರ್ ಮೂಲಕ ಮತ್ತಷ್ಟು ಕುತೂಹಲ ಹುಟ್ಟುಹಾಕಲಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ