ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆದಿದ್ದು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಇದೇ 31ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ರೇಣುಕಾಸ್ವಾಮಿ ಕೇಸ್ನಲ್ಲಿ ನಟಿ ಪವಿತ್ರ ಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಅವರ ಪರ ವಕೀಲ ಟಾಮಿ ಸೆಬಾಸ್ಟಿಯನ್ ಅವರು ವಾದ ಮಂಡಿಸಿ, ಈ ಪ್ರಕರಣದಲ್ಲಿ ಪವಿತ್ರಾ ಗೌಡ ಯಾವುದೇ ಪಾತ್ರವಿಲ್ಲ. ದರ್ಶನ್ ಅವರೇ ಪವಿತ್ರಾ ಗೌಡ ಅವರನ್ನು ಕರೆದುಕೊಂಡು ಹೋಗಿದ್ದು. ಈ ಹಿನ್ನೆಲೆ ಅವರಿಗೆ ಜಾಮೀನು ನೀಡಬೇಕೆಂದು ಕೋರಿದರು.
ವಕೀಲ ಎಸ್ ಪಿ ಪಿ ಪ್ರಸನ್ನ ಕುಮಾರ್ ಅವರು ಪವಿತ್ರಾ ಗೌಡಗೆ ಯಾಕೆ ಜಾಮೀನು ಕೊಡಬಾರದು ಎಂಬುದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.
ಪ್ರಕರಣ ಇನ್ನೂ ತನಿಖೆಯಲ್ಲಿದೆ. ಈಗಾಗಲೇ ಸಿಕ್ಕಿರುವ ಸಾಕ್ಷ್ಯಗಳಲ್ಲಿ ಕಪ್ಪು ಬಣ್ಣದ ಸ್ಕಾರ್ಫಿಯೋ ಕಾರಿನಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಶೆಡ್‌ನೊಳಗೆ ಹೋಗುತ್ತಿವುದು ರೆಕಾರ್ಡ್ ಆಗಿದೆ. ಆರೋಪಿಗಳು ಕೃತ್ಯ ನಡೆಸಿರೋದು ಬಯಲಾಗಿದೆ. ಸಿಕ್ಕಿರುವ ಸಾಕ್ಷ್ಯಗಳು ತುಂಬಾ ಪ್ರಮುಖವಾಗಿದೆ.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿಯ ಆದೇಶವನ್ನು ಇದೇ 31ಕ್ಕೆ ಮುಂದೂಡಿದೆ. ಆದ್ದರಿಂದ ಸದ್ಯ ಪವಿತ್ರ ಗೌಡಗೇ ಜೈಲೇ ಗತಿ.