ಬೆಂಗಳೂರು: ಕಾಂತಾರ ಚಾಪ್ಟರ್ 1 ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ತುಂಬುವ ಮೊದಲೇ ಒಟಿಟಿಗೆ ಬರಲು ಸಜ್ಜಾಗಿದೆ. ಆದರೆ ಫ್ಯಾನ್ಸ್ ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ.
ಕಾಂತಾರ ಚಾಪ್ಟರ್ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಈಗಾಗಲೇ 1000 ಕೋಟಿ ಸನಿಹ ಗಳಿಕೆಯನ್ನೂ ಮಾಡಿದೆ. ಈಗಲೂ ಥಿಯೇಟರ್ ಗಳಲ್ಲಿ ಕಾಂತಾರ ಪ್ರದರ್ಶನ ಕಾಣುತ್ತಿದೆ.
ಅದರ ನಡುವೆಯೇ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಕಾಂತಾರ ಸಿನಿಮಾವನ್ನು ಅಮೆಝೋನ್ ಪ್ರೈಮ್ ನೂರಾರು ಕೋಟಿ ರೂ. ಕೊಟ್ಟು ಹಕ್ಕು ಖರೀದಿ ಮಾಡಿತ್ತು. ಇದೀಗ ಬಹುಭಾಷೆಗಳಲ್ಲಿ ಅಕ್ಟೋಬರ್ 31 ರಿಂದ ಅಮೆಝೋನ್ ಪ್ರೈಮ್ ನಲ್ಲಿ ಪ್ರಸಾರ ಕಾಣಲಿದೆ.
ಆದರೆ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಭಾರೀ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಥಿಯೇಟರ್ ಗೆ ಹೋಗಿ ಜನ ಈಗಲೂ ಸಿನಿಮಾ ನೋಡುತ್ತಿರುವಾಗ ಒಟಿಟಿಯಲ್ಲಿ ಬಿಡುಗಡೆ ಮಾಡಲು ಇಷ್ಟು ಅವಸರವೇನಿದೆ? ಇದರಿಂದ ಚಿತ್ರದ ಗಳಿಕೆ ಮೇಲೆ ಹೊಡೆತ ಬೀಳೋದಿಲ್ವಾ? ಥಿಯೇಟರ್ ನಲ್ಲಿ ಟಿಕೆಟ್ ದರ ಇಳಿಕೆ ಮಾಡಿ ಇನ್ನಷ್ಟು ದಿನ ಸಿನಿಮಾ ಪ್ರದರ್ಶನ ಮಾಡಬಹುದಿತ್ತು. ಅದಾದ ಮೇಲೆ ಒಟಿಟಿಯಲ್ಲಿ ಬಿಟ್ಟಿದ್ದರೆ ಸಾಕಿತ್ತು ಎಂದು ಅನೇಕರು ಅಭಿಪ್ರಾಯಪಡುತ್ತಿದ್ದಾರೆ.