ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ರೋಚಕ ಘಟ್ಟಕ್ಕೆ ತಲುಪಿದ್ದು, ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿ ದಾಸ ಇದ್ದಾರೆ. ದರ್ಶನ್ ಪರ ವಕೀಲ ಟವರ್ ಲೊಕೇಶನ್ ಬಗ್ಗೆ ಕೋರ್ಟ್‌ನಲ್ಲಿ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.
ವಕೀಲ ನಾಗೇಶ್ ಅವರು ಮಂಡಿಸಿದ ವಾದ ದರ್ಶನ್‌ಗೆ ವರವಾಗುತ್ತಾ ಎಂದು ದಿನದ ಅಂತ್ಯದವರೆಗೆ ಕಾದು ನೋಡಬೇಕಿದೆ.
57ನೇ ಸಿಸಿಎಚ್ ಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ವಾದ ಪ್ರತಿವಾದ ನಡೆಯುತ್ತಿದೆ. ಇನ್ನೂ ಬೇಲ್ ನಿರೀಕ್ಷೆಯಲ್ಲಿರುವ ದರ್ಶನ್ ಅವರಿಗೆ ಇಂದಿನ ಸಿವಿ ನಾಗೇಶ್ ವಾದ ತುಂಬಾನೇ ಪ್ರಮುಖವಾಗಿದೆ.
ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ಕೌಂಟರ್‌ಗೆ ಇಂದು ನಾಗೇಶ್ ವಾದ ಮಂಡಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ದಿನ ಎಲ್ಲ ಆರೋಪಿಗಳು ಹಾಗೂ ಸಾಕ್ಷಿಗಳ ಟವರ್ ಲೊಕೇಶನ್ ಒಂದೇ ಕಡೆಯಲ್ಲಿ ತೋರಿಸಿದೆ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.
ಇದಕ್ಕೆ ಇಂದು ಪ್ರತಿಕ್ರಿಯಿಸಿದ ನಾಗೇಶ್, ಎಸ್‌ಪಿಪಿ ಪ್ರಸನ್ನ ಅವರನ್ನು ತನಿಖಾಧಿಕಾರಿಗಳು ತಪ್ಪು ದಾರಿಗರೆಳೆದಿದ್ದಾರೆ. ಜೂನ್ 9ರಂದು ಗೂಗಲ್ ಅಡ್ರೆಸ್, ಟವರ್ ಲೊಕೇಷನ್, ಗೂಗಲ್ ಮ್ಯಾಪ್ ಆಧರಿಸಿದ ದಾಖಲೆ ಸಲ್ಲಿಕೆಯಾಗಿದೆ. ಆದರೆ ಇದೇ ತಂತ್ರಜ್ಞಾನವನ್ನು ಆಧರಿಸಿ ಬೇರೆಡೆ ಇದ್ದರೆಂದು ತೋರಿಸಬಹುದು. ನಾನು ಇಲ್ಲಿ ನಿನ್ನೆ ಕುಳಿತಿದ್ದೆ. ಆದರೆ ಹೈಕೋರ್ಟ್‌ನಲ್ಲಿ ಕುಳಿತಿರುವಂತೆ ತೋರಿಸಬಹುದು. ಟವರ್ ಲೊಕೇಷನ್ ಆಧರಿಸಿ ನಡೆಸಿದ ತನಿಖೆಗೆ ಮಹತ್ವವಿಲ್ಲ ಎಂದು ನಾಗೇಶ್ ಹೇಳಿದ್ದಾರೆ.
ಒಟ್ಟಾರೆ ದರ್ಶನ್ ಜಾಮೀನು ಅರ್ಜಿ ವಾಚರಣೆ ರೋಚಕ ಘಟ್ಟಕ್ಕೆ ತಲುಪಿದ್ದು, ದರ್ಶನ್ ಅವರು ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.