ಭಾಜೀರಾವ್ ಮಸ್ತಾನಿ ಸಿನಿಮಾಕ್ಕೂ ಪ್ರಶಸ್ತಿ ಸಿಗುವ ಕಾತುರದಲ್ಲಿದ್ದೆ- ದೀಪಿಕಾ ಪಡುಕೋಣೆ

ಮಂಗಳವಾರ, 28 ಜೂನ್ 2016 (09:44 IST)
ಈ ಬಾರಿಯ ಐಫಾ ಪ್ರಶಸ್ತಿಯಲ್ಲಿ ದೀಪಿಕಾ ಅವರಿಗೆ ಪೀಕು ಸಿನಿಮಾದ ಅಭಿನಯಕ್ಕಾಗಿ ಉತ್ತಮ ನಟಿ ಪ್ರಶಸ್ತಿ ಲಭಿಸಿದ. ಆದ್ರೆ ತೀರ್ಪುಗಾರರು ಪೀಕು  ಸಿನಿಮಾದ ಅಭಿನಯಕ್ಕಾಗಿ ದೀಪಿಕಾ ಅವರಿಗೆ ಉತ್ತನ ನಟಿ ಪ್ರಶಸ್ತಿ ನೀಡಿದ್ರೆ ದೀಪಿಕಾ ಅವರು ಮಾತ್ರ ತಮ್ಮ ಭಾಜೀರಾಮ್ ಮಸ್ತಾನಿ ಸಿನಿಮಾದ ಅಭಿನಯಕ್ಕಾಗಿ ಪ್ರಶಸ್ತಿ ಬರುತ್ತೆ ಅಂತಾ ಅಂದುಕೊಂಡಿದ್ದರಂತೆ.

ಪ್ರಶಸ್ತಿ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿದ ದಿಪ್ಪಿ, ಪ್ರಶಸ್ತಿ ಸಿಕ್ಕಿರೋದಕ್ಕೆ ನನಗೆ ತುಂಬಾನೇ ಖುಷಿಯಾಗಿದೆ. ಆದ್ರೆ ನಾನು ಭಾಜೀರಾವ್ ಮಸ್ತಾನಿ ಸಿನಿಮಾಕ್ಕೂ ಪ್ರಶಸ್ತಿ ಬರುತ್ತೆ ಅಂತಾ ಅಂದುಕೊಂಡಿದ್ದೆ. ಆದ್ರೆ ಇನ್ನು ಅವಕಾಶವಿದೆ. ಬಾಜೀರಾವ್ ಮಸ್ತಾನಿ ಸಿನಿಮಾ ನನ್ನ ಪಾಲಿಗೆ ಅತ್ಯಂತ ವಿಶೇಷವಾದ ಸಿನಿಮಾ. ತಮಾಷಾ ಸಿನಿಮಾ ಕೂಡ ನನ್ನ ಪಾಲಿಗೆ ಭಿನ್ನವಾದದ್ದು. ಹಾಗಾಗಿ ನಮ್ಮ ಹೆಸರುಗಳು ಒಂದು ಪ್ರಶಸ್ತಿಗಾಗಿ ಅನೇಕ ಬಾರಿ ಕೇಳಿ ಬಂದಾಗ ನಿಜಕ್ಕೂ ಅದು ತುಂಬಾನೇ ಖುಷಿಕೊಡುತ್ತೆ ಅಂತಾ ಅವರು ಹೇಳಿದ್ದಾರೆ.ಏನೇ ಆಗಲಿ ಪ್ರಶಸ್ತಿ ಸಿಕ್ಕಿರೋದು ನನಗೆ ತುಂಬಾನೇ ಖುಷಿ ನೀಡಿದೆ ಅಂತಾ ಅವರು ಹೇಳಿದ್ದಾರೆ.
 
ಇನ್ನು ಬಾಜೀರಾವ್ ಮಸ್ತಾನಿ ಸಿನಿಮಾಕ್ಕಾಗಿ ರಣ್ ವೀರ್ ಸಿಂಗ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೇ ಅತ್ಯುತ್ತಮ ಸಿನಿಮಾಟೋಗ್ರಾಫಿ ಹಾಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಕೂಡ ಸಿನಿಮಾ ಬಾಚಿಕೊಂಡಿದೆ.ಅಲ್ಲದೇ ಅತ್ಯುತ್ತಮ ನಟಿ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ಕಥೆ  ಪ್ರಶಸ್ತಿಯನ್ನು ಪೀಕು ಸಿನಿಮಾ ತನ್ನದಾಗಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ