ಗಾನಗಂಧರ್ವ ಎಸ್ಪಿ ಬಾಲಸುಬ್ರಮಣ್ಯಂಗೆ ವಿಶಿಷ್ಟ ಗೌರವ ನೀಡಿದ ಬೇಕರಿ!
ಗುರುವಾರ, 24 ಡಿಸೆಂಬರ್ 2020 (09:10 IST)
ಪುದುಚೇರಿ: ಇತ್ತೀಚೆಗಷ್ಟೇ ನಮ್ಮನ್ನಗಲಿದ ಗಾನಗಂಧರ್ವ ಎಸ್ಪಿ ಬಾಲಸುಬ್ರಮಣ್ಯಂಗೆ ಪುದುಚೇರಿಯ ಬೇಕರಿಯೊಂದು ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದೆ.
ಎಸ್ಪಿಬಿ ಅವರ ಚಾಕಲೇಟ್ ಮೂರ್ತಿಯನ್ನು ನಿರ್ಮಿಸಿರುವ ಬೇಕರಿ ಅದನ್ನು ಸಾರ್ವಜನಿಕ ವೀಕ್ಷಣೆಗೆ ಇರಿಸಿದೆ. ಈ ಚಾಕಲೇಟ್ ಮೂರ್ತಿ 339 ಕಿ.ಗ್ರಾಂ. ತೂಕ ಹೊಂದಿದ್ದು, 5.8 ಅಡಿ ಎತ್ತರವಿದೆ. ಬೇಕರಿಯ ಚೆಫ್ ರಾಜೇಂದ್ರನ್ ಈ ಕ್ರಿಯಾತ್ಮಕ ಚಾಕಲೇಟ್ ಮೂರ್ತಿಯನ್ನು ನಿರ್ಮಿಸಿದ್ದಾರಂತೆ. ಇದೀಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.