ಬಿಬಿಕೆ10: ದೊಡ್ಮನೆಗೆ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ
ಬಿಗ್ ಬಾಸ್ ಕನ್ನಡ ಸೀಸನ್ 1 ರ ಸ್ಪರ್ಧಿಯಾಗಿದ್ದ ಬ್ರಹ್ಮಾಂಡ ಗುರೂಜಿ ಈ ವಾರ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿಕೊಟ್ಟಿದ್ದಾರೆ. ತಮ್ಮ ಟ್ರೇಡ್ ಮಾರ್ಕ್ ಮುಂಡಾ ಮುಚ್ತು ಎನ್ನುತ್ತಲೇ ಮನೆಯೊಳಗೆ ಕಾಲಿಟ್ಟ ಗುರೂಜಿ ತಮ್ಮದೇ ಶೈಲಿಯಲ್ಲಿ ಈ ವಾರ ಮನೆ ಸದಸ್ಯರನ್ನು ಆಟವಾಡಿಸಲಿದ್ದಾರೆ!
ಬ್ರಹ್ಮಾಂಡ ಗುರೂಜಿ ಎಂದರೆ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಅವರು ಸೀರಿಯಸ್ ಆಗಿ ಮಾತನಾಡುತ್ತಿದ್ದರೂ ನೋಡುಗರಿಗೆ ಅದು ತಮಾಷೆ ಎನಿಸುತ್ತದೆ. ಹೀಗಾಗಿಯೇ ವೀಕ್ಷಕರಿಗೆ ಎಂಟರ್ ಟೈನ್ ಮೆಂಟ್ ಕೊಡಲು ಈ ಬಾರಿ ಬಿಗ್ ಬಾಸ್ ಗುರೂಜಿಯನ್ನೇ ಮನೆಯೊಳಗೆ ಕರೆಸಿಕೊಂಡಿದ್ದಾರೆ. ಅವರು ಯಾವ ರೀತಿ ಮನೆಯ ಸದಸ್ಯರಿಗೆ ಟಾಸ್ಕ್ ಕೊಟ್ಟು ಮನರಂಜನೆ ನೀಡಲಿದ್ದಾರೆ ಎಂದು ನೋಡಬೇಕಿದೆ.