ಬಿಬಿಕೆ10: ಡ್ರೋಣ್ ಪ್ರತಾಪ್ ಮುದ್ದೆ ಮಾಡಿದ ತಪ್ಪಿಗೆ ಮನೆ ಮಂದಿಗೆ ಉಪವಾಸದ ಶಿಕ್ಷೆ
ಶುಕ್ರವಾರ, 15 ಡಿಸೆಂಬರ್ 2023 (10:40 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಇದೀಗ ಮನೆ ಮಂದಿ ಊಟವಿಲ್ಲದೇ ಪರದಾಡುವ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಡ್ರೋಣ್ ಪ್ರತಾಪ್ ಮಾಡಿದ ತಪ್ಪು.
ಬಿಗ್ ಬಾಸ್ ಮನೆಯಲ್ಲಿ ಊಟ, ಅಡುಗೆ ಸಾಮಾನು ಬಳಸುವುದಕ್ಕೆ ಇತಿಮಿತಿಯಿದೆ. ಯಾವುದನ್ನೂ ಬೇಕಾಬಿಟ್ಟಿಯಾಗಿ ಬಳಸುವಂತಿಲ್ಲ. ಹಾಗೆ ಮಾಡಿದರೆ ಬಿಗ್ ಬಾಸ್ ತಕ್ಷ ಶಿಕ್ಷೆ ನೀಡುವುದು ಖಂಡಿತಾ.
ಆದರೆ ಇದೀಗ ಮನೆಯಲ್ಲಿ ಡ್ರೋಣ್ ಪ್ರತಾಪ್ ಮುದ್ದೆ ಮಾಡಿ ಮನೆಯವರಿಗೆಲ್ಲಾ ಹಂಚಿದ್ದು, ಹೆಚ್ಚು ಗ್ಯಾಸ್ ಮುಗಿಸಿದ್ದಾರೆಂದು ಗ್ಯಾಸ್ ಕಟ್ ಮಾಡಲಾಗಿದೆ. ಇದರಿಂದಾಗಿ ಅಡುಗೆ ಮಾಡಲಾಗದೇ ಮನೆಯವರು ಪರದಾಡುತ್ತಿದ್ದಾರೆ.
ಊಟ ಸಿಗದೇ ಹೋದರೆ ನಾನಂತೂ ಸುಮ್ನಿರಲ್ಲ ಎಂದು ವಿನಯ್ ಕೂಗಾಡುತ್ತಿದ್ದಾರೆ. ಇತ್ತ ಡ್ರೋಣ್ ಪ್ರತಾಪ್ ಮತ್ತು ಅವರಿಗೆ ಮುದ್ದೆ ಮಾಡಲು ಸಾಥ್ ಕೊಟ್ಟವರು ಕ್ಯಾಮರಾ ಮುಂದೆ ಕೈ ಮುಗಿದು ನಿಂತು ಗ್ಯಾಸ್ ಕೊಡಿ ಎಂದು ಅಂಗಲಾಚುವಂತಾಗಿದೆ.