ಇಳಯರಾಜ ಆರೋಗ್ಯದಲ್ಲಿ ಚೇತರಿಕೆ

ಮಂಗಳವಾರ, 18 ಆಗಸ್ಟ್ 2015 (10:22 IST)
ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ ಮಾಂತ್ರಿಕ ಇಳಯರಾಜ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅವರ ಅಳಿಯ ನಿರ್ಮಾಪಕ ವೆಂಕಟ ಪ್ರಭು ತಿಳಿಸಿದ್ದಾರೆ.
ಶನಿವಾರ ಇಳಯರಾಜ ಅವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಕಿಬ್ಬೊಟ್ಟೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರೋದರಿಂದ ಮನೆಗೆ ಮರಳಲಿದ್ದಾರೆ ಅಲ್ಲದೇ ಇದೊಂದು ಜನರಲ್ ಚೆಕ್ ಅಪ್ ಅಂತಾ ಅವರ ಅಳಿಯ ವೆಂಕಟ ಪ್ರಭು ಟ್ವೀಟ್ ಮಾಡಿದ್ದಾರೆ.
 
ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾಗಿರುವ ಇಳಯರಾಜಾ ಇದುವೆರೆಗೂ 5000ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂದಿಗೂ ಇಳಯರಾಜ ಸಂಗೀತ ನಿರ್ದೇಶನಕ್ಕಾಗಿ ಅದೆಷ್ಟೋ ನಿರ್ಮಾಪಕರು ನಿರ್ದೇಶಕರು ಮುಗಿ ಬೀಳುತ್ತಾರೆ.

ವೆಬ್ದುನಿಯಾವನ್ನು ಓದಿ