ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸುವದರ ಬಗ್ಗೆ ಭಾರತಿ ವಿಷ್ಣುವರ್ದನ್ ಹೇಳಿದ್ದೇನು?
ಶುಕ್ರವಾರ, 8 ಮಾರ್ಚ್ 2019 (08:58 IST)
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭೆ ಚುನಾವಣಾ ಕಣದಿಂದ ಸ್ಪರ್ಧಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.
ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದರೆ, ಅವರ ವಿರುದ್ಧ ಇದೀಗ ಸುಮಲತಾ ಸ್ಪರ್ಧಿಸುತ್ತಿರುವುದರಿಂದ ಮಂಡ್ಯ ಕಣದ ಬಗ್ಗೆ ಎಲ್ಲರೂ ಕುತೂಹಲದಿಂದ ನೋಡುವಂತಾಗಿದೆ. ಇದೊಂದು ರೀತಿಯಲ್ಲಿ ಸ್ಯಾಂಡಲ್ ವುಡ್ ತಾರೆಯರ ಕದನವಾಗಿ ಮಾರ್ಪಟ್ಟಿದೆ.
ಈ ಹಿನ್ನಲೆಯಲ್ಲಿ ಅಂಬರೀಶ್ ಕುಚಿಕು ಸ್ನೇಹಿತ ಸಾಹಸಸಿಂಹ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ತಮ್ಮ ಸ್ನೇಹಿತೆ ಸುಮಲತಾ ಸ್ಪರ್ಧೆ ಬಗ್ಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಶ್ನೆ ಬಂದಾಗ ‘ನಮಗೂ ಇಲೆಕ್ಷನ್ ಗೂ ಭಾರೀ ದೂರ. ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾ ಇದ್ದಾಗ ನಮ್ಮ ಯಜಮಾನರು ಅವರ ಜತೆ ಇರ್ತಾ ಇದ್ದರು. ಅದು ಬಿಟ್ಟರೆ ನಮಗೆ ಇದರ ಬಗ್ಗೆ ಆಸಕ್ತಿಯಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.