ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್

ಗುರುವಾರ, 7 ಮಾರ್ಚ್ 2019 (15:26 IST)
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಈಗ ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದಾರೆ. ಅತ್ತ ಸುಮಲತಾ ಬಿರುಸಿನ ಪ್ರವಾಸದಲ್ಲಿ ತೊಡಗಿದ್ದರೆ, ಇತ್ತ ನಿಖಿಲ್ ದೇವರ ಮೊರೆ ಹೋಗಿದ್ದಾರೆ.

ನಾವು ನಂಬಿಕೊಂಡಿರುವ ದೇವರು ಶೃಂಗೇರಿ ಶಾರದಾಂಬೆ. ತಾಯಿ ಶಾರದೆಂಬೆ ಹಾಗೂ ಶ್ರೀಗಳ  ಆಶೀರ್ವಾದ ಪಡೆಯಲು ಬಂದಿದ್ದೇವೆ. ಶ್ರೀಗಳ ಜೊತೆ ದೊಡ್ಡವರ ನಂಟು ಹಿಂದಿನಿಂದಲೂ ಇದೆ. ಅವರ ಆಶೀರ್ವಾದ, ತಾಯಿಯ ಆಶೀರ್ವಾದ ಇವತ್ತು ತಂದೆಯವರನ್ನ ಆ ಸ್ಥಾನಕ್ಕೆ ಕೂರಿಸಿದೆ. ಹೀಗಂತ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ‌

ಮಂಡ್ಯದಲ್ಲಿ ಲೋಕಸಭಾ ಸಭೆ ಅಭ್ಯರ್ಥಿ ವಿಚಾರವಾಗಿ ಶೃಂಗೇರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಇದು ಜೆ.ಡಿ.ಎಸ್ ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರ ನಿರ್ಧಾರವಾಗಿದೆ. ಬಹುತೇಕ ಶಾಸಕರ ಜೊತೆಗೆ ಕುಳಿತು ಚರ್ಚೆ ನಡೆಸಿ ತೀರ್ಮಾನ ಮಾಡಿದ್ದಾರೆ. ಮಂಡ್ಯ ಜನತೆಯ ನಾಡಿ ಮಿಡಿತ ಅರ್ಥಮಾಡಿಕೊಂಡಿದ್ದಕ್ಕೆ ಪಕ್ಷ ಟಿಕೆಟ್ ನೀಡಿದೆ ಎಂದರು.
ಮಂಡ್ಯ ಜನತೆಯ ಸೇವೆ ಮಾಡಲು ರೆಡಿಯಾಗಿದ್ದೇನೆ ಎಂದು ಅವರು  ಶಾರದಾಂಬೆ ದರ್ಶನದ ಬಳಿಕ ಹೇಳಿಕೆ ನೀಡಿದ್ದಾರೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ