ಇಂದು ರಿಲೀಸ್ ಆಗಲಿದೆ ಪ್ರಿನ್ಸ್ ಮಹೇಶ್ ಬಾಬು ಅವರು ನಟಿಸಿರುವ 'ಭರತ್ ಅನೇ ನೇನು' ಚಿತ್ರ

ಶುಕ್ರವಾರ, 20 ಏಪ್ರಿಲ್ 2018 (15:49 IST)
ಹೈದರಾಬಾದ್ : ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಅವರು ನಟಿಸಿರುವ ಬಹುನಿರೀಕ್ಷಿಯ ಚಿತ್ರ 'ಭರತ್ ಅನೇ ನೇನು' ಇಂದು(ಏ.20ರಂದು) ಜಗತ್ತಿನಾದ್ಯಂತ ರಿಲೀಸ್ ಆಗಲಿದೆ.


ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಟೀಸರ್ ಬಿಡುಗಡೆಯಾಗಿ 24 ಗಂಟೆ ಆಗುವಷ್ಟರಲ್ಲೇ 11.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಹಾಗೇ 18 ಗಂಟೆಗಳಲ್ಲಿ 1 ಕೋಟಿ ಡಿಜಿಟಲ್ ವ್ಯೂ ಈ ಚಿತ್ರಕ್ಕೆ ಸಿಕ್ಕಿತ್ತು. ಈ ಚಿತ್ರ ಟೀಸರ್ ರಿಲೀಸ್ ಆಗಿ 24 ಗಂಟೆಗಳಲ್ಲಿ ಇತರ ತೆಲುಗು ಸಿನಿಮಾದ ಟೀಸರ್ಗಳಿಗಿಂತ ಹೆಚ್ಚು ನೋಡಲ್ಪಟ್ಟ ಸಿನಿಮಾ ಟೀಸರ್ ಎಂಬ ಹೆಗ್ಗಳಿಕೆ ಕೂಡ ಪಡೆದುಕೊಂಡಿತ್ತು.


ರಿಲೀಸ್ ಗೂ ಮುನ್ನ ಸಕತ್ ಸೌಂಡ್ ಮಾಡಿದಂತಹ ಈ ಚಿತ್ರದಲ್ಲಿ ಮಹೇಶ್ ಬಾಬು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಭರತ್ ರಾಮ್ ಎಂಬ ಯುವಕನ ಪಾತ್ರ ಮಾಡುತ್ತಿದ್ದು, ಆತ ಮುಂದೆ ತನ್ನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾನೆ ಎಂಬುದು ಚಿತ್ರದ ಕಥೆ. ಒಟ್ಟಿನಲ್ಲಿ ಇಂದು ಈ ಚಿತ್ರ ರಿಲೀಸ್ ಆಗುತ್ತಿದ್ದು ಜನರಿಂದ ಯಾವ ಪ್ರತಿಕ್ರಿಯೆ ಸಿಗುತ್ತೆ ಎಂದು ಕಾದು ನೋಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ