ಬಿಗ್ ಬಾಸ್ ಕನ್ನಡ: ಅಸ್ಪೃಶ್ಯ ಪದ ಬಳಸಿದ್ದಕ್ಕೆ ಕ್ಷಮೆ ಕೇಳಿದ ಚೈತ್ರಾ ಕೋಟೂರು

ಶನಿವಾರ, 9 ನವೆಂಬರ್ 2019 (10:26 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಅಸ್ಪೃಶ್ಯರು ಎಂದು ಪದ ಬಳಸಿ ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಪರ್ಧಿ ಚೈತ್ರಾ ಕೋಟೂರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.


ಚೈತ್ರಾ ಸಹಸ್ಪರ್ಧಿ ಹರೀಶ್ ರಾಜ್ ಜತೆಗೆ ಮಾತನಾಡುವಾಗ ನಾವೇನು ಅಸ್ಪೃಶ್ಯರಾ ಎಂದು ಹೇಳಿದ್ದು, ದಲಿತ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿವಾದದ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದರು.

ಈ ಬಗ್ಗೆ ಕನ್ ಫೆಷನ್ ರೂಂಗೆ ಬಂದು ಸಾರ್ವಜನಿಕವಾಗಿ ಚೈತ್ರಾ ಕ್ಷಮೆ ಯಾಚಿಸಿದ್ದು, ನಾನು ಯಾವುದೇ ವರ್ಗಕ್ಕೆ ಅವಮಾನ ಮಾಡುವ ಉದ್ದೇಶದಿಂದ ಆ ಪದ ಬಳಸಿಲ್ಲ. ಕುವೆಂಪು ಅವರ ವಿಶ್ವಮಾನವ ಪದದಲ್ಲಿ ನಂಬಿಕೆಯುಳ್ಳವಳು ನಾನು. ಎಲ್ಲಾ ವರ್ಗದವರಿಗೂ ಸಮಾನ ಹಕ್ಕಿದೆ. ಅಸ್ಪೃಶ್ಯತೆ ಎನ್ನುವುದು ಈ ಜಗತ್ತಿನಲ್ಲಿ ಈಗ ಕಡಿಮೆಯಾಗುತ್ತಿದೆ. ಅದು ಇನ್ನೂ ಸಂಪೂರ್ಣವಾಗಿ ನಾಶವಾಗಬೇಕು ಎಂಬುದೇ ನನ್ನ ಉದ್ದೇಶ ಎಂದು ಕ್ಷಮೆ ಕೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ