ನಟ ದರ್ಶನ್ ಗೆ ಮುಂದೆ ಎಲ್ಲಿ ಜೈಲೂಟ, ಇಂದು ನಿರ್ಧಾರ

Krishnaveni K

ಶನಿವಾರ, 30 ಆಗಸ್ಟ್ 2025 (11:45 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಮುಂದೆ ಯಾವ ಜೈಲೂಟ ಎಂದು ತೀರ್ಮಾನವಾಗಲಿದೆ.

ನಟ ದರ್ಶನ್ ಈ ಮೊದಲು ಬಳ್ಳಾರಿ ಜೈಲಿನಲ್ಲಿದ್ದರು. ಆದರೆ ಅಲ್ಲಿದ್ದಾಗ ಬೆನ್ನು ನೋವು ಕಾಡುತ್ತಿದೆ ಎಂದು ಕೋರ್ಟ್ ಮುಂದೆ ವೈದ್ಯಕೀಯ ವರದಿ ಸಲ್ಲಿಸಿ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ್ದರಿಂದ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ.

ಈಗ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಹಿಂದೆ ಇಲ್ಲಿ ದರ್ಶನ್ ರಾಜಾತಿಥ್ಯ ಪಡೆದಿದ್ದರು. ಹೀಗಾಗಿ ಇಲ್ಲಿಂದ ಅವರನ್ನು ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಇಂದು ಸಿಸಿಎಚ್ 57 ನೇ ಕೋರ್ಟ್ ನಲ್ಲಿ ನಡೆಸಲಾಗುತ್ತದೆ.

ನಟ ದರ್ಶನ್ ಗೆ ಬಳ್ಳಾರಿ ಜೈಲು, ಪವಿತ್ರಾ ಗೌಡ, ಅನುಕುಮಾರ್ ಗೆ ಪರಪ್ಪನ ಅಗ್ರಹಾರ ಜೈಲು, ಜಗದೀಶ್, ಲಕ್ಷ್ಮಣ್ ರನ್ನು ಶಿವಮೊಗ್ಗ ಜೈಲಿಗೆ ಮತ್ತು ನಾಗರಾಜ್ ಕಲಬುರಗಿ ಜೈಲು ಹಾಗೂ ಪ್ರದೂಷ್ ನನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಲಾಗಿದೆ. ಇದನ್ನು ನ್ಯಾಯಾಲಯ ಪುರಸ್ಕರಿಸಿದರೆ ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ