ಅದರಂತೆ ಈಗ ಬ್ಲರ್ ಫೋಟೋ ಪ್ರಕಟಿಸಿದೆ. ಈ ಫೋಟೋದಲ್ಲಿ ಯಾರೆಲ್ಲಾ ಇದ್ದಾರೆ ಎಂದು ಡಿಕೋಡ್ ಮಾಡುವ ಕೆಲಸ ನಡೆದಿದೆ. ಅದರಂತೆ ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್ ರಾಜ್, ಜೀ ಕನ್ನಡ ಸತ್ಯ ಧಾರವಾಹಿ ಹೀರೋಯಿನ್ ಸತ್ಯ ಆಗಿದ್ದ ಗೌತಮಿ ಜಾಧವ್, ಮಲಯಾಳಂ ಮೂಲದ ಸ್ಯಾಂಡಲ್ ವುಡ್ ನಟಿ ಭಾವನಾ ಮೆನನ್, ಕಿರುತೆರೆ ನಟ ಚೇತನ್ ಚಂದ್ರ, ಲಕ್ಷ್ಮೀ ಬಾರಮ್ಮಾ ಧಾರವಾಹಿಯ ಕೀರ್ತಿ ಖ್ಯಾತಿಯ ತನ್ವಿ ರಾವ್ ಮುಂತಾದವರು ಇರಬಹುದು ಎಂದು ಬ್ಲರ್ ಫೋಟೋ ನೋಡಿ ಡಿಕೋಡ್ ಮಾಡಲಾಗುತ್ತಿದೆ.