ಬಿಗ್ ಬಾಸ್ ಶೋಗೆ ಹೋಗುವ ಸ್ಪರ್ಧಿಗಳ ಹೆಸರು ಬಹಿರಂಗ

ಭಾನುವಾರ, 28 ಫೆಬ್ರವರಿ 2021 (10:04 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ 8 ನೇ ಆವೃತ್ತಿಗೆ ಇಂದಿನಿಂದ ಚಾಲನೆ ಸಿಗಲಿದ್ದು, ಕೆಲವು ಸ್ಪರ್ಧಿಗಳ ಹೆಸರು ಈಗಾಗಲೇ ಬಹಿರಂಗವಾಗಿದೆ.


ಇಂದು ಸಂಜೆ 6 ಗಂಟೆಯಿಂದ ಬಿಗ್ ಬಾಸ್ ಓಪನಿಂಗ್ ಸೆರಮನಿ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಿನ್ನೆಯೇ ಕಿಚ್ಚ ಸುದೀಪ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಕೆಲವು ಮೂಲಗಳ ಪ್ರಕಾರ ರವಿಶಂಕರ್ ಗೌಡ, ಸುಕೃತಾ ನಾಗ್, ವಿನಯಾ ಪ್ರಸಾದ್, ರಾಗಿಣಿ ದ್ವಿವೇದಿ, ಸರಿಗಮಪ ಖ್ಯಾತಿಯ ಗಾಯಕ ಹನುಮಂತ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ ಎಂದು ಸುದ್ದಿ ಓಡಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ