ಬಿಗ್ ಬಾಸ್ ಕನ್ನಡದಲ್ಲಿ ಈ ಬಾರಿ ರಾಜಕಾರಣಿಯೂ ಇದ್ದಾರೆ!

ಶುಕ್ರವಾರ, 26 ಫೆಬ್ರವರಿ 2021 (09:29 IST)
ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ರಾಜಕೀಯ ವ್ಯಕ್ತಿಯೂ ಇದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಮಾಹಿತಿ ನೀಡಿದ್ದಾರೆ.


ಬಿಗ್ ಬಾಸ್ ಶೋಗೆ ಮುನ್ನ ಕಿಚ್ಚ ಸುದೀಪ್ ಜೊತೆಗೆ ಪತ್ರಿಕಾಗೋಷ್ಠಿ ನಡೆಸಿದ ಪರಮೇಶ್ವರ್ ಗುಂಡ್ಕಲ್ ‘ಈ ಬಾರಿ ಎಲ್ಲಾ ರಂಗದವರೂ ಇರ್ತಾರೆ. ಸಿನಿಮಾದವರು, ಕ್ರೀಡಾಳುಗಳು, ತಂತ್ರಜ್ಞರು, ಜೊತೆಗೆ ಎಲ್ಲರನ್ನೂ ಮನರಂಜಿಸಲು ಹಾಡುಗಾರರೂ ಇರ್ತಾರೆ’ ಎಂದು ಮಾಹಿತಿ ನೀಡಿದ್ದಾರೆ. ಭಾನುವಾರದಿಂದ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ