ಬಿಗ್ ಬಾಸ್ ಕನ್ನಡ: ಈ ವಾರ ದಾಖಲೆಯ ಏಳು ಮಂದಿ ನಾಮಿನೇಷನ್

ಮಂಗಳವಾರ, 22 ನವೆಂಬರ್ 2016 (11:04 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿರುವ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮನೆಯಿಂದ ಈ ವಾರ ಹೊರ ಹೋಗಲು ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಏಳು ಮಂದಿ ನಾಮಿನೇಟ್ ಆಗಿ ದಾಖಲೆ ಮಾಡಿದ್ದಾರೆ.

ಅದರಲ್ಲೂ ಪ್ರಥಮ್ ಬಿಗ್ ಬಾಸ್ ಶುರುವಾದಾಗಿನಿಂದ ಈ ವಾರದವರೆಗೂ ಸತತವಾಗಿ ನಾಮಿನೇಟ್ ಆದ ದಾಖಲೆ ಮಾಡಿದ್ದಾರೆ. ನಾಮಿನೇಟ್ ಆದ ಉಳಿದವರೆಂದರೆ ಸಂಜನಾ, ಓಂ ಪ್ರಕಾಶ್ ರಾವ್, ನಿರಂಜನ ದೇಶಪಾಂಡೆ, ರೇಖಾ, ಮೋಹನ್. ನಾಯಕ ಭುವನ್ ಮಾಳವಿಕಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದು, ಅವರೂ ಎಲಿಮಿನೇಷನ್ ಪ್ರಕ್ರಿಯೆಯಲ್ಲಿದ್ದಾರೆ.

ಇನ್ನು ಹೆಚ್ಚು ತರಕಾರಿ ತಿನ್ನುವ ಸ್ಪರ್ಧೆ ಏರ್ಪಡಿಸಿ, ವಿಜೇತ ಭುವನ್ ಅವರನ್ನು ಈ ವಾರದ ನಾಯಕನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ