ಬಿಗ್ ಬಾಸ್ ನ ವಿನ್ನರ್ ಚಂದನ್ ಶೆಟ್ಟಿ ಮದುವೆಯಾಗುವ ಹುಡುಗಿ ಹೇಗಿರಬೇಕಂತೆ ಗೊತ್ತಾ...?

ಬುಧವಾರ, 31 ಜನವರಿ 2018 (06:21 IST)
ಬೆಂಗಳೂರು : ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ವಿನ್ನರ್ ಸಿಂಗರ್ ಚಂದನ್ ಶೆಟ್ಟಿ ಅವರು ತಾವು ಮದುವೆಯಾಗುವ ಹುಡುಗಿಗೆ ಯಾವ ಗುಣವಿರಬೇಕು ಎಂಬುದನ್ನು ಹೇಳಿದ್ದಾರೆ.

 
ಮಾಧ್ಯಮವೊಂದರಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಚಂದನ್ ಶೆಟ್ಟಿ ಅವರಿಗೆ ನೀವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಿದ ಪ್ರಶ್ನೆಗೆ, ಅವರು ‘ನನ್ನ ತಂದೆ-ತಾಯಿ ಹೇಗೆ ನಿರ್ಧರಿಸಿತ್ತಾರೋ ಆ ರೀತಿ ಮದುವೆಯಾಗಲ್ಲೂ ಇಷ್ಟಪಡುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಶನಿವಾರ ಪಂಚಾಯ್ತಿ ನಡೆದಾಗ ಸುದೀಪ್ ಸರ್ ಹತ್ತಿರ ನಾನು ಮದುವೆ ಆಗೋ ಹುಡುಗಿ ಹೋಂ ಮೇಕರ್ ಆಗಿ ಇರಬೇಕು ಎಂದು ಹೇಳಿದ್ದೆ’ ಎಂದರು. ‘,ನನ್ನ ತಂದೆ-ತಾಯಿ, ನನಗೆ  ಬೆನ್ನುಲುಬು ಆಗಿ ಇರಬೇಕು. ಗೃಹಿಣಿ ಎಂದ ತಕ್ಷಣ ಮನೆಯಲ್ಲಿ ಅಡುಗೆ ಮಾಡಿ, ಊಟ ಬಡಿಸಿ, ಮನೆ ಕೆಲಸ ಮಾಡಿಕೊಂಡು ಇರಬೇಕು ಎಂದಲ್ಲ. ಅತ್ತೆ-ಮಾವನಿಗೆ ತಕ್ಕ ಸೊಸೆ, ಗಂಡನಿಗೆ ಒಳ್ಳೆ ಹೆಂಡತಿ ಹಾಗೂ ಮೈದುನನಿಗೆ ಒಳ್ಳೆಯ ಅತ್ತಿಗೆ ಆಗಿ ಇರಬೇಕು. ಸಂಗೀತದ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ