ರುಚಿಯಾದ ಬಾಳೆಹಣ್ಣಿನ ಹಲ್ವಾ ಮಾಡುವುದು ಹೇಗೆ ಗೊತ್ತಾ...?

ಮಂಗಳವಾರ, 30 ಜನವರಿ 2018 (11:25 IST)
ಬೆಂಗಳೂರು : ಎಲ್ಲರ ಮನೆಯಲ್ಲಿ ಬಾಳೆಹಣ್ಣು ಇದೆ ಇರುತ್ತದೆ. ಅದರಿಂದ ತುಂಬಾ ಸುಲಭವಾದ ರೆಸಿಪಿಯನ್ನು ತಯಾರಿಸಬಹುದು. ಅದೇನೆಂದರೆ ಬಾಳೆಹಣ್ಣಿನ ಹಲ್ವಾ. ಇದು ತುಂಬಾ ಟೇಸ್ಟಿಯಾಗಿ ಇರುತ್ತದೆ.


ಬೇಕಾಗುವ ಸಾಮಾಗ್ರಿಗಳು :
1. ತುಪ್ಪ – 3-4 ಟೇಬಲ್ ಸ್ಪೂನ್
2. ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ ಸ್ವಲ್ಪ
3. ದ್ರಾಕ್ಷಿ ಸ್ವಲ್ಪ
4. ರವೆ – 1 ಕಪ್
5. ಹಣ್ಣಾದ ಬಾಳೆಹಣ್ಣು – 4-5
6. ಹಾಲು – 2.5 ಕಪ್
7. ಸಕ್ಕರೆ – 5-6 ಕಪ್
8. ಏಲಕ್ಕಿ ಪೌಡರ್


ಮಾಡುವ ವಿಧಾನ:
* ಮೊದಲಿಗೆ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಫ್ರೈ ಮಾಡಿಟ್ಟುಕೊಳ್ಳಿ.
* ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ 1 ಕಪ್ ರವೆ ಹಾಕಿ ಸುವಾಸನೆ ಬರುವವರೆಗೂ ಹುರಿಯಿರಿ.
* ಬಳಿಕ ಹಣ್ಣಾದ ಬಾಳೆಹಣ್ಣನ್ನು ಸಣ್ಣಗೆ ತುಂಡರಿಸಿ ಮಿಕ್ಸ್ ಮಾಡಿ.
* ನಂತರ 2.5 ಕಪ್ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
* ಅದಕ್ಕೆ ಸಕ್ಕರೆ ಸೇರಿಸಿ ಹಲ್ವಾ ಹದಕ್ಕೆ ಬರುವತನಕ ಕೈಯಾಡಿಸುತ್ತೀರಿ.
* ಕೊನೆಗೆ ಏಲಕಿ ಪೌಡರ್ ಹಾಕಿ, ಫ್ರೈ ಮಾಡಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಸೇರಿಸಿ ಕೆಳಗಿಳಿಸಿ.
ಸಿಂಪಲ್ ಬಾಳೆಹಣ್ಣಿನ ಹಲ್ವಾ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ