ದರ್ಶನ್ ಜೈಲಿನಲ್ಲಿದ್ದಾಗಲೇ ಮಗನಿಗೆ ಇನ್ನು ಮುಂದೆ ಕೆಲವೊಬ್ಬರ ಸಹವಾಸ ಬಿಡುವುದಾಗಿ ಪ್ರಾಮಿಸ್ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಅದೀಗ ನಿಜವಾಗಿರುವಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮೊನ್ನೆ ಸಂಕ್ರಾಂತಿ ದಿನ ತಮ್ಮ ಮಗ, ಪತ್ನಿ, ಸಹೋದರನ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಅವರೊಂದಿಗೆ ಆತ್ಮೀಯವಾಗಿ ಕಾಲ ಕಳೆಯುತ್ತಿರುವ ಫೋಟೋಗಳು ಎಲ್ಲರ ಗಮನ ಸೆಳೆದಿದೆ.
ಇಷ್ಟು ದಿನ ಕೇವಲ ತಮ್ಮದೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಸುತ್ತಾಡುತ್ತಿದ್ದ ದರ್ಶನ್ ಈಗ ಪಾಠ ಕಲಿತಂತಿದೆ. ಜೈಲಿನಿಂದ ಹೊರಬಂದ ಮೇಲೆ ತಮ್ಮ ಪತ್ನಿ, ಮಗ ಕುಟುಂಬದವರ ಜೊತೆಗೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.