ಪವಿತ್ರಾ ಗೌಡ ಬೆನ್ನು ಸವರಿ ದರ್ಶನ್ ಮಾತುಕತೆ: ನ್ಯಾಯಾಲಯದಲ್ಲಿ ಹೇಳಿದ್ದೇನು

Krishnaveni K

ಶುಕ್ರವಾರ, 10 ಜನವರಿ 2025 (12:34 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್ ಮತ್ತು ಸ್ನೇಹಿತೆ ಪವಿತ್ರಾ ಗೌಡ ಇಂದು ನ್ಯಾಯಾಲಯದಲ್ಲಿ ಬಹಳ ದಿನಗಳ ನಂತರ ಮುಖಾಮುಖಿಯಾಗಿದ್ದು, ಪವಿತ್ರಾ ಬೆನ್ನು ಸವರಿ ದರ್ಶನ್ ಸಾಂತ್ವನ ಹೇಳಿದರು ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಎಲ್ಲಾ ಆರೋಪಿಗಳೂ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪವಿತ್ರಾ ಗೌಡ ಮೊದಲೇ ಬಂದು ತಮ್ಮ ವಕೀಲರ ಜೊತೆ ನಿಂತಿದ್ದರು. ದರ್ಶನ್ ಕೊಂಚ ತಡವಾಗಿ ಬಂದಿದ್ದಾರೆ.

ಬಂದ ತಕ್ಷಣ ದರ್ಶನ್ ರನ್ನು ಪವಿತ್ರಾ ಮಾತನಾಡಿಸಿದ್ದಾರೆ. ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ದರ್ಶನ್ ಕೂಡಾ ಪವಿತ್ರಾ ಬೆನ್ನು ಸವರಿ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಪ್ರಕರಣದ ನಂತರ ಇಬ್ಬರೂ ಪರಸ್ಪರ ದೂರವಾಗಲಿದ್ದಾರೆ ಎಂದೆಲ್ಲಾ ಸುದ್ದಿಗಳಿತ್ತು. ಆದರೆ ಇಂದಿನ ದೃಶ್ಯ ಗಮನಿಸಿದರೆ ಇಬ್ಬರ ನಡುವಿನ ಸ್ನೇಹ ಯಥಾ ಪ್ರಕಾರ ಮುಂದುವರಿದಿದೆ ಎನ್ನಲಾಗಿದೆ.

ಇಂದು ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣವನ್ನು ಫೆಬ್ರವರಿ 25 ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ್ದಾರೆ. ಇನ್ನು, ಪವಿತ್ರಾ ಹೊರ ರಾಜ್ಯದ ದೇವಾಲಯಕ್ಕೆ ಭೇಟಿ ನೀಡಲು ಕೋರ್ಟ್ ಅನುಮತಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ