ಕೆಸಿಸಿ ಟೂರ್ನಿಯಲ್ಲಿ ಬೃಹತ್ ಕನ್ನಡ ಬಾವುಟ ಅನಾವರಣ: ಏನಿದರ ವಿಶೇಷ?

ಶನಿವಾರ, 25 ಫೆಬ್ರವರಿ 2023 (08:40 IST)
Photo Courtesy: Twitter
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಆರಂಭವಾದ ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಬೃಹತ್ ಕನ್ನಡ ಬಾವುಟ ರಾರಾಜಿಸಿದೆ.

ಟೂರ್ನಿ ಆರಂಭಕ್ಕೆ ಮುನ್ನ ಕೆಸಿಸಿ ಟೂರ್ನಿಯ ಎಲ್ಲಾ ತಂಡದ ಆಟಗಾರರು ಮೈದಾನದಲ್ಲಿ ಕನ್ನಡ ಬಾವುಟವನ್ನು ಎತ್ತಿ ಹಿಡಿದು ಗೌರವ ಸಲ್ಲಿಸಿದ್ದಾರೆ.

ಈ ಬಾವುಟ 80/140 ಅಡಿಗಳಷ್ಟು ವಿಸ್ತಾರವಾಗಿದ್ದು, ಬೃಹತ್ ಕನ್ನಡ ಧ್ವಜವಾಗಿತ್ತು. ಕನ್ನಡ ಧ್ವಜಕ್ಕೆ ಇಂತಹದ್ದೊಂದು ಗೌರವ ಸಮರ್ಪಿಸಿದ್ದು, ಅಭಿಮಾನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ