ಬಿಗ್ ಎಂ ಜೆ ಶೃತಿ ಅವರ ಬಿಗ್ ಕಾಫಿ ಕಾರ್ಯಕ್ರಮಕ್ಕೆ 'ಅತ್ಯುತ್ತಮ ರೇಡಿಯೊ ಕಾರ್ಯಕ್ರಮ ಪ್ರಶಸ್ತಿ

ಗುರುವಾರ, 24 ಮೇ 2018 (18:30 IST)
ಭಾರತದ ಅತಿದೊಡ್ಡ ರೇಡಿಯೊ ಜಾಲಗಳಲ್ಲೊಂದಾದ ಬಿಗ್ ಎಫ್ ಎಂ, ಇತ್ತೀಚೆಗೆ ನಡೆದ ಇಂಡಿಯಾ ರೇಡಿಯೊ ಫೋರಂ 2018ರಲ್ಲಿ ಎಂಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಅಲ್ಲದೆ ಇದು ರೇಡಿಯೊ ಉದ್ಯಮದಲ್ಲಿ ಅತ್ಯುತ್ತಮ ವಿಷಯಗಳು ಮತ್ತು ಸೃಜನಶೀಲತೆಯನ್ನು ಗುರುತಿಸಿ, ಗೌರವಿಸುವ ಪ್ರತಿಷ್ಠಿತ ಪ್ರಶಸ್ತಿ ವೇದಿಕೆಯಲ್ಲಿ ಆರು ರನ್ನರ್ ಅಪ್ ಸ್ಥಾನಗಳನ್ನೂ ಪಡೆಯಿತು. ಗೆದ್ದಿರುವ ಎಂಟು ಶೀರ್ಷಿಕೆಗಳಲ್ಲಿ 92.7 ಬಿಗ್ ಎಫ್ ಎಂ ಬೆಂಗಳೂರಿನ ಬಿಗ್ ಎಂಜೆ ಶೃತಿಯ ಬಿಗ್ ಕಾಫಿ ಕಾರ್ಯಕ್ರಮವು ಅತ್ಯುತ್ತಮ ರೇಡಿಯೊ ಕಾರ್ಯಕ್ರಮ – ಕನ್ನಡ ವರ್ಗದಲ್ಲಿ ಪ್ರಥಮ ಸ್ಥಾನ ಪಡೆಯಿತು ಮತ್ತು ಅವರಿಗೆ ಕನ್ನಡ ವರ್ಗದಲ್ಲಿ ವರ್ಷದ ಆರ್ ಜೆ ಯ ರನ್ನರ್ ಅಪ್ ಸ್ಥಾನವನ್ನೂ ನೀಡಲಾಯಿತು.
 
ಅತಿಹೆಚ್ಚು ಪ್ರಶಸ್ತಿಗಳನ್ನು ಗೆದ್ದುಕೊಂಡ ಮತ್ತು ಅಗ್ರ ರೇಡಿಯೊ ಜಾಲಗಳಲ್ಲೊಂದಾದ ಬಿಗ್ ಎಫ್ ಎಂ, ಆರಂಭದಿಂದಲೂ ತನ್ನ ವಿವಿಧ ಸ್ವಂತ ವಿಷಯಗಳನ್ನು ಆಧರಿಸಿದ ಮತ್ತು ಆಕರ್ಷಕ ಸಂಗೀತದೊಂದಿಗೆ ಪ್ರಚಾರ ಮಾಡಲಾಗುವ ರಾಷ್ಟ್ರೀಯ ಮತ್ತು ನಗರ ನಿರ್ದಿಷ್ಟ ಕಾರ್ಯಕ್ರಮಗಳಿಗೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈ ಕಾರ್ಯಕ್ರಮಗಳ ತಿರುಳನ್ನು ಅದರ ಪ್ರತಿಭಾನ್ವಿತ ಮತ್ತು ಜನಪ್ರಿಯ ಆರ್ ಜೆ ಗಳು ವರ್ಧಿಸಿದ್ದು, ಇವರು ವಿವಿಧ ಮಾರುಕಟ್ಟೆಗಳಲ್ಲಿ ತಮ್ಮ ಶ್ರೋತೃಗಳೊಂದಿಗೆ ಬಲವಾದ ಸಂಬಂಧವನ್ನು ಸ್ಥಾಪಿಸಿದ್ದಾರೆ.
 
ಅದರ ಗೆಲ್ಲುವ ಗುಣಗಳನ್ನು ಕೊಂಡಾಡುತ್ತ ಮಾತನಾಡಿದ ಸುನೀಲ್ ಕುಮಾರನ್, ದೇಶೀಯ ಮುಖ್ಯಸ್ಥರು, ಥ್ವಿಂಕ್ ಬಿಗ್ ಹೇಳಿದರು "ಐಆರ್ ಎಫ್ ನಲ್ಲಿನ ವರ್ಗಗಳು ರೇಡಿಯೊ ಸಂಸ್ಥೆಗಳು ಪ್ರದರ್ಶಿಸುವ ಅದ್ಭುತವಾದ ಕೆಲಸಗಳ ಬಗ್ಗೆ ಸ್ಪಷ್ಟವಾದ ಭೇದಗಳನ್ನು ಮಾಡುತ್ತವೆ, ಮತ್ತು ಇದರಿಂದಾಗಿ ಅದರ ಪರಿಣಾಮಕಾರಿ ನೀಡೀಕಯ ಆಳವಾದ ಅರ್ಥವನ್ನು ಒದಗಿಸುತ್ತದೆ. ಇಂಡಿಯಾ ರೇಡಿಯೊ ಫೋರಂ ನಲ್ಲಿ ಗೆದ್ದಿರುವ ಶೀರ್ಷಿಕೆಗಳು, ಪ್ರೋಗ್ರಾಮಿಂಗ್, ಆರ್ ಜೆ ಮತ್ತು ಆನ್ ಏರ್ ಪ್ರಮೋಶನ್ ಗಳಲ್ಲಿ, ಶ್ರೋತೃಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಬಿಗ್ ಎಫ್ ಎಂ ನ ಸಾಮಥ್ರ್ಯವನ್ನು ಮತ್ತು ನಾವೀನ್ಯತೆಯ ಮತ್ತು ಸೃಜನಶೀಲತೆಯ ಮೇಲೆ ನೀಡುವ ತೀವ್ರ ಗಮನವನ್ನು ತೋರಿಸುತ್ತದೆ. ಇನ್ನೂ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲಲು ನಾವು ಕಾತುರರಾಗಿದ್ದೇವೆ ಮತ್ತು ಶ್ರೋತೃಗಳಿಗೆ ಮತ್ತು ಪಣಿದಾರರಿಗೆ ಶ್ರೋತೃತ್ವದ ಅನುಭವವನ್ನು ವರ್ಧಿಸುವಲ್ಲಿ ಹೆಚ್ಚು ಬಲಿಷ್ಟರಾಗಲು ಉದ್ದೇಶಿಸಿದ್ದೇವೆ."
ಪ್ರಶಸ್ತಿ ಗೆದ್ದ ತನ್ನ ಅನುಭವದ ಬಗ್ಗೆ ಮಾತನಾಡುತ್ತ, ಬಿಗ್ ಎಂಜೆ ಶೃತಿ ಹೇಳಿದರು "ಇದಕ್ಕೆ ಇದಕ್ಕಿಂತ ಉತ್ತಮವಾದ ಸಮಯವಿರಲಿಲ್ಲ. ನಾನು ಮೇ ತಿಂಗಳಲ್ಲಿ ನನ್ನ ಕೆಲಸದ ವಾರ್ಷಿಕೋತ್ಸವ, ನನ್ನ ಹುಟ್ಟು ಹಬ್ಬವನ್ನು ಆಚಿಸುತ್ತೇನೆ ಮತ್ತು ಜೊತೆಗೆ ಈ ಮೇ ನಲ್ಲಿ ಎರಡು ಐ ಆರ್ ಎಫ್ ಗಳೂ ಕೂಡ. ನನ್ನ ಕಾರ್ಯಕ್ರಮವಾದ ಬಿಗ್ ಕಾಫಿ ವಿತ್ ಶೃತಿಗೆ ಬಂದ ಪ್ರಶಸ್ತಿ ಮತ್ತು ವರ್ಷದ ಆರ್ ಜೆ – ಕನ್ನಡ ವರ್ಗ ದಲ್ಲಿ ಪಡೆದ ರನ್ನರ್ ಅಪ್ ಸ್ಥಾನದಿಂದ ನನಗೆ ಬಹಳ ಹರ್ಷವಾಗಿದೆ, ಗೌರವವೆನಿಸಿದೆ. ನಮ್ಮ ಬೆಂಗಳೂರಿನ ಜನತೆಯ ತೀವ್ರವಾದ ಪ್ರೇಮ ಮತ್ತು ನಿಷ್ಠೆಗೆ ನನ್ನ ಕೃತಜ್ಞತೆಯು ಇನ್ನೂ ಹೆಚ್ಚಾಗುತ್ತದೆ ಎಂದೂ ಹೇಳಬೇಕಿಲ್ಲ. ಕೇವಲ ಒಂದು ಶೃತಿಯಿಂದ ನನ್ನನ್ನು ಪಟ್ ಪಟ್ ಪಟಾಕಿ ಶೃತಿಯನ್ನಾಗಿಸಿದ ಬಿಗ್ ಎಫ್ ಎಂ ಗೆ ನನ್ನ ಧನ್ಯವಾದಗಳು ಮತ್ತು ನನ್ನಲ್ಲಿ ಯಾವಾಗಲೂ ನಂಬಿಕೆ ಇಟ್ಟಿದ್ದ ಮತ್ತು ಆಶಾಭಾವನೆ ನೀಡುತ್ತಿದ್ದ ಶ್ರೀ ತರುಣ್ ಕಾಟಿಯಾಲ್ ಅವರಿಗೆ ದೊಡ್ಡ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದೆ ಇನ್ನೂ ಹೆಚ್ಚು ಉತ್ತಮ ಕೆಲಸ ಮಾಡಿ, ಜನರ ಮತ್ತು ಸಮಾಜದ ಜೀವನದಲ್ಲಿ ಬದಲಾವಣೆ ತರಲು ಹೆಚ್ಚು ಶ್ರಮಿಸುತ್ತೇನೆಂದು ಆಶಿಸುತ್ತೇನೆ."
 
ಶೃತಿಯವರಲ್ಲದೆ, ಅನ್ನು ಕಪೂರ್, ಬಾಲಾಜಿ ಮತ್ತು ಸಂಗ್ರಾಂ ವರ್ಷದ ಆರ್ ಜೆ - ಹಿಂದಿ, ತಮಿಳ್ ಮತ್ತು ಮರಾಠಿ ವರ್ಗಗಳ್ಳಲ್ಲಿ ಅನುಕ್ರಮವಾಗಿ ಗೆದ್ದುಕೊಂಡು ಈ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.
 
ಈ ಜಾಲದ ಪ್ರಶಸ್ತಿಗಳ ಸುರಮಳೆಗೆ ಕಾರಣ ಅವರ ಸಮಾನ ಉದ್ದೇಶದ ತತ್ವ, ಗ್ರಾಹಕರನ್ನು ಅರ್ಥಮಾಡಿಕೊಂಡು ಆಧರಿಸಿದ ಪ್ರೋಗ್ರಾಮಿಂಗ್, ಭವಿಷ್ಯಮುಖಿಯಾಗಿ ವಿವಿಧ ಕಾರ್ಯತಂತ್ರಗಳ ಅನುಷ್ಠಾನ, ಮತ್ತು ಹೆಚ್ಚು ಆರ್ ಒ ಐ ನೀಡಲು ಪರಿಣಾಮಕಾರಿಯಾದ ಸಂಘಟಿತ ಆಂದೋಲನಗಳ ತಂತ್ರ.
 
ಗೆದ್ದ ಪ್ರಶಸ್ತಿಗಳು
 
ಇಂಡಿಯಾ ರೇಡಿಯೊ ಫೋರಂ
 
ಗೆದ್ದ ಬಹುಮಾನಗಳು
 
•           ವರ್ಷದ ಆರ್ ಜೆ (ಹಿಂದಿ) – ಅನ್ನು ಕಪೂರ್
 
•           ವರ್ಷದ ಆರ್ ಜೆ (ಹಿಂದಿ- ಮೆಟ್ರೊ ಅಲ್ಲದ ಸ್ಟೇಶನ್) – ಆರ್ ಜೆ ಅನ್ನು ಕಪೂರ್
 
•           ವರ್ಷದ ಆರ್ ಜೆ (ತಮಿಳು) – ಆರ್ ಜೆ ಬಾಲಾಜಿ
 
•           ವರ್ಷದ ಆರ್ ಜೆ (ಮರಾಠಿ) – ಆರ್ ಜೆ ಸಂಗ್ರಾಂ ಖೋರ್ಪಡೆ
 
•           ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಮರಾಠಿ) - ಬ್ರೇಕ್ ಫಾಸ್ಟ್ ಶೋ ವಿತ್ ಬಿಗ್ ಎಂಜೆ ಸಂಗ್ರಾಂ
 
•           ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಕನ್ನಡ) - ಬಿಗ್ ಕಾಫಿ
 
•           ಅತ್ಯುತ್ತಮ ರೇಡಿಯೊ ಪ್ರಮೊ – ಇನ್-ಹೌಸ್ (ತಮಿಳು) – ವಲ್ರ್ಡ್ ಟಾಯ್ಲೆಟ್ ಡೇ
 
•           ಅತ್ಯುತ್ತಮ ರೇಡಿಯೊ ಪ್ರಮೊ – ಇನ್-ಹೌಸ್ (ಮರಾಠಿ) - ಬ್ರೇಕ್‍ಫಾಸ್ಟ್ ಶೋ - ಬಿಗ್ ಎಂಜೆ ಸಂಗ್ರಾಂ ರನ್ನರ್ ಅಪ್
 
•           ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಬ್ರೇಕ್ ಫಾಸ್ಟ್ ಅಲ್ಲದ – ತಮಿಳು) - ನೈಟ್ ಶೋ
 
•           ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಬ್ರೇಕ್ ಫಾಸ್ಟ್ ಅಲ್ಲದ – ತೆಲುಗು) – ರೆಟ್ರೊ ಟಾಕೀಸ್
 
•           ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಕನ್ನಡ) – ರೆಟ್ರೊ ಸವಾರಿ – ಆರ್ ಜೆ ರ್ಯಾಪಿಡ್ ರಶ್ಮಿ
 
•           ಅತ್ಯುತ್ತಮ ರೇಡಿಯೊ ಪ್ರಮೊ0 ಇನ್ -ಹೌಸ್ (ತೆಲುಗು) - ಬಿಗ್ ಜುನಿಯರ್ ರಾಕ್ ಸ್ಟಾರ್ಸ್
 
•           ಅತ್ಯುತ್ತಮ ರೇಡಿಯೊ ಪ್ರಮೊ0 ಇನ್ -ಹೌಸ್ (ಮಲಯಾಳಂ) – ಪ್ರಗಾಶಂ ನೇಶನ್ ಪ್ರೈಡ್
 
•           ವರ್ಷದ ಆರ್ ಜೆ (ಕನ್ನಡ) – ಆರ್ ಜೆ ಶೃತಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ