ಕಾಂಗ್ರೆಸ್ ಪಕ್ಷದ ಪತನಕ್ಕೆ ಇದು ಮೊದಲ ಮೆಟ್ಟಿಲು: ಶ್ರೀರಾಮುಲು

ಗುರುವಾರ, 24 ಮೇ 2018 (18:14 IST)
ನಿನ್ನೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ತೃತಿಯ ರಂಗದವರು ಭಾಗಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಪತನಕ್ಕೆ ಇದು ಮೊದಲ ಮೆಟ್ಟಿಲು ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ತೃತಿಯ ರಂಗದಲ್ಲಿ ಕಾಂಗ್ರೆಸ್ ಪಕ್ಷ‌ ಪ್ರತ್ಯೇಕ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.  ತೃತೀಯ ರಂಗದಲ್ಲಿ ಕಾಂಗ್ರೆಸ್ ಸೇರಿಸಿಕೊಳ್ಳುವ ಆಧ್ಯತೆ ಇಲ್ಲ. ಪ್ರಾದೇಶಿಕ ಹಿತಾಸಕ್ತಿ ಇದೆ. ಮಳೆಗಾಲದಲ್ಲಿ ಅಣಬೆಗಳು ಹುಟ್ಟಿಕೊಂಡ ಹಾಗೆ ತೃತೀಯ ರಂಗದ ಪಕ್ಷಗಳು ಹುಟ್ಟಿಕೊಳ್ಳುತ್ತವೆ. ಚುನಾವಣೆ ಸಮಯದಲ್ಲಿ ಮಾತ್ರ ಇವರು ಒಂದಾಗ್ತಾರೆ, ನಂತರ ಕಾಣೋಲ್ಲ ತೃತೀಯ ರಂಗದ ಪಕ್ಷಗಳು ಎಂದು ಲೇವಡಿ ಮಾಡಿದ್ದಾರೆ.
 
ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದೆ. ತಕ್ಕಡಿಯಲ್ಲಿನ ಕಪ್ಪೆಗಳು ತೃತೀಯ ರಂಗದ ನಾಯಕರು- ಅವಕಾಶವಾದಿ, ಸ್ವಾರ್ಥದ ನಾಯಕರು ಇದ್ದಾರೆ- ಅವರೆಲ್ಲರೂ ಹೊಂದಾಣಿಕೆ ಇಲ್ಲ. ತೃತೀಯ ರಂಗದಲ್ಲಿ ಇರುವವರು ಮೋದಿಯವರ ಕೈಯಲ್ಲಿ ಸೋತು ಸುಣ್ಣವಾದವರೇ 104 ಸ್ಥಾನ ನಮಗೆ‌ ಬಂದಿದ್ರು ನಮಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
 
 ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ವಿಚಾರವಾಗಿ ಯೂ ಟರ್ನ್ ಹೊಡೆದಿದ್ದಾರೆ. ಪೂರ್ಣ ಬಹುಮತ ಇಲ್ಲ ಅಂತ ಹೇಳಿದ್ದಾರೆ. ಬದ್ದತೆ ಇರಬೇಕು ಸಿಎಂ ಕುಮಾರಸ್ವಾಮಿ ಗೆ ರೈತರ ಸಾಲ ಮನ್ನಾ ಮಾಡಿ. ಕಾಂಗ್ರೆಸ್, ಜೆಡಿಎಸ್ ಪ್ರಣಾಳಿಕೆ ಏನೇ ಇರಲಿ, ಕೊಟ್ಟ ಸಾಲ ಮನ್ನಾ ಮಾತು ಉಳಿಸಿಕೊಳ್ಳಲಿ ಎಂದು ಗುಡುಗಿದರು.
 
ನನಗೆ ಬಹುಮತ ಇಲ್ಲ ಅಂತಿದ್ದಾರೆ ಎಚ್ಡಿಕೆ. ಆದ್ದರಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಸೂಕ್ತ.. ನಮಗೆ ತೃತೀಯ ರಂಗದಿಂದ ಭಯವಿಲ್ಲ- ರಾಷ್ಟ್ರೀಯ ಐಕ್ಯತೆ ಇವರಿಗಿಲ್ಲ. ಪ್ರಾದೇಶಿಕ ಹಿತಾಸಕ್ತಿ ಇವರದ್ದು ನಾವು ಯಾರ ತಂಟೆಗೂ ಹೋಗೊಲ್ಲ, ನಾನು ಯಾವ ಶಾಸಕರನ್ನು ಸಂಪರ್ಕ ಮಾಡೋಲ್ಲ, ಡಿಕೆಶಿ ರೆಕಾರ್ಡ್ ಮಾಡಿಕೊಳ್ಳುತ್ತಾರೆ, ನಮಗೆ ಯಾಕೆ ಬೇಕು,
 
 ನಾವು ಯಾವ ಜೆಡಿಎಸ್, ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡಿಲ್ಲ, ಆ ಕಡೆ ತಲೆ ಕೂಡ ಹಾಕಿ ಮಲಗೋಲ್ಲ. ಅವರು ನಾಳೆ ಬಹುಮತ ಸಾಬಿತು ಪಡಿಸ್ತಾರೆ. ನನ್ನ ಒಲವು ಇಷ್ಟೆ, ರೈತರ ಸಾಲ ಮನ್ನಾ ಮಾಡಲಿ. ಸಾಲ ಮನ್ನಾ ಮಾಡೊಕಾಗಲ್ಲ ಅಂದ್ರೆ ಕುರ್ಚಿ ಬಿಟ್ಟು ತೊಲಗಿ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ