ಬಾಲಿವುಡ್‌ನಲ್ಲಿ ಬಿಗ್ ಆಫರ್ ಬಾಚಿಕೊಂಡ್ರಾ ಸಮರ್ಜಿತ್ ಲಂಕೇಶ್

Sampriya

ಮಂಗಳವಾರ, 24 ಸೆಪ್ಟಂಬರ್ 2024 (14:48 IST)
Photo Courtesy X
ಕನ್ನಡದ ಗೌರಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಮರ್ಜಿತ್ ಲಂಕೇಶ್ ಅವರು ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ.

ದೊಡ್ಡ ಸ್ಟಾರ್ ಆಗಬೇಕೆಂಬ ಕನಸ್ಸಿನೊಂದಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮರ್ಜಿತ್ ಅವರು ಗೌರಿ ಸಿನಿಮಾದಲ್ಲಿ ಅದ್ಭುತ ಅಭಿನಯದ ಮೂಲಕ ಭರವಸೆಯ ನಾಯಕರಾಗಿದ್ದಾರೆ.  ಗೌರಿ ಸಿನಿಮಾದ ಅಭಿನಯಕ್ಕಾಗಿ ಸಮರ್ಜಿತ್ ಅವರು ಲುಮಿಯರ್ ನ್ಯಾಶನಲ್ ಅವಾರ್ಡ್‌ ಸಿಕ್ಕಿದೆ.

ಸದ್ಯ ಕನ್ನಡದ ಹೃತಿಕ್ ರೋಶನ್ ಎಂದೇ ಕರೆಸಿಕೊಳ್ಳುತ್ತಿರುವ ಸಮರ್ಜಿತ್ ಅವರಿಗೆ ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗದಿಂದ ಆಫರ್ ಬರುತ್ತಿದೆ.

ಸಿಕ್ಕ ಮಾಹಿತಿ ಪ್ರಕಾರ ಹೌದು, ಸಮರ್ಜಿತ್ ಅವರಿಗೆ ಬಾಲಿವುಡ್‌ನ ದೊಡ್ಡ ಪ್ರೊಡಕ್ಷನ್ ಹೌಸ್ ದೊಡ್ಡ ಆಫರ್ ನೀಡಿದೆ ಎನ್ನಲಾಗಿದೆ. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಮರ್ಜಿತ್ ಜೊತೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ