ಶಿವಕಾರ್ತೀಕೇಯನ್ 'ಡಾಕ್ಟರ್’ ಚಿತ್ರ ಕ್ರಿಸ್ ಮಸ್ ಗೆ ಬಿಡುಗಡೆಯಾಗಲಿದೆ ಎಂದುಕೊಂಡ ಅಭಿಮಾನಿಗಳಿಗೆ ಬಿಗ್ ಶಾಕ್

ಮಂಗಳವಾರ, 17 ನವೆಂಬರ್ 2020 (14:16 IST)
ಚೆನ್ನೈ : ನಟ ಶಿವಕಾರ್ತೀಕೇಯನ್ ಅಭಿನಯದ ‘ಡಾಕ್ಟರ್’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ ಎನ್ನಲಾಗಿದೆ.

ನಟ ಶಿವಕಾರ್ತೀಕೇಯನ್ ಅಭಿನಯದ ‘ಡಾಕ್ಟರ್’ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದು, ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕೊರೊನಾ ಬಳಿಕ ಚಿತ್ರದ ಅಂತಿಮ ಶೂಟಿಂಗ್ ಶುರುವಾಗಿ ಇದೀಗ ಮುಕ್ತಾಯಗೊಂಡಿದೆ.  ಡಬ್ಬಿಂಗ್ ಕೂಡ ಪೂರ್ಣಗೊಂಡಿದೆ.

ಹಾಗಾಗಿ ಕ್ರಿಸ್ ಮಸ್  ಹಬ್ಬದಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ದೀಪಾವಳಿಯಂದು ಚಿತ್ರತಂಡ ಬಿಡುಗಡೆ ಮಾಡಿದ ಪೋಸ್ಟರ್ ನಲ್ಲಿ ಚಿತ್ರ ಮುಂದಿನ ವರ್ಷ ಬೇಸಿಗೆ ರಜಾದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ