ದೊಡ್ಮನೆಯಲ್ಲಿ ತನ್ನಷ್ಟಕ್ಕೆ ಒಡೆಯುತ್ತಿದೆ ತಟ್ಟೆಗಳು, ಸ್ಪರ್ಧಿಗಳ ಎದೆಯಲ್ಲಿ ಢವಢವ

Sampriya

ಬುಧವಾರ, 9 ಅಕ್ಟೋಬರ್ 2024 (18:53 IST)
Photo Courtesy X
ಬೆಂಗಳೂರು: ಕನ್ನಡ ಕಿರುತೆರ ಲೋಕದ ಅಂತ್ಯತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಮನೆಯ ಸದ್ಯಸರ ಮನೆಯಲ್ಲಿ ಇದೀಗ ಢವಢವ ಶುರುವಾಗಿದೆ.

ಈ ಭಯ ನಾಮಿನೇಷನ್ ಆಗಲೀ, ಟಾಸ್ಕ್‌ ವಿಚಾರವಾಗಲಿ ಅಲ್ಲ. ಬಿಗ್‌ಬಾಸ್‌ ಮನೆಯಲ್ಲಿ ತಟ್ಟೆಗಳು ತನ್ನಷ್ಟಕ್ಕೆ ಒಡಿಯುತ್ತಿದ್ದು, ಇದನ್ನು ನೋಡಿದ ಬಿಗ್‌ಬಾಸ್‌ ಸ್ಪರ್ಧಿಗಳು ದೆವ್ವ ಏನಾದರೂ ಹೀಗೆ ಮಾಡುತ್ತಿದೆಯಾ ಎನ್ನುತ್ತಿದ್ದಾರೆ.  

ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ನರಕ ಹಾಗೂ ಸ್ವರ್ಗ ನಿವಾಸಿಗಳು ಎಲ್ಲರು ಮಾತಿನಲ್ಲಿ ತೊಡಗಿದ್ದರು. ಅಡುಗೆ ಮನೆಯಲ್ಲಿ  ಸದ್ದು ಬಂದಿದೆ. ಒಮ್ಮೆಲೇ ಬೆಚ್ಚಿಬಿದ್ದ ಮನೆಮಂದಿ, ಹೋಗಿ ನೋಡಿದಾಗ ತಟ್ಟೆ ಒಡೆದು ಬಿದ್ದಿದೆ.

ಕೆಲವರು ಏನೂ ದೆವ್ವ ಏನಾದರೂ ಇದೆಯಾ. ಎರಡು ತಟ್ಟೆಗಳು ಹೀಗೇ ಒಡೆದಿದೆ ಎಂದರು. ಮಂಜು ಹಾಗೂ ಗೌತಮಿ ಅವರು ದೆವ್ವ ಏನಾದರು ಇದ್ದರೆ ಅದು ಒಡೆದು ಹೋಯಿತು. ಒಳ್ಳೆದು ಇರುವಾಗ ಕೆಟ್ಟದು ಕೂಡಾ ಇರುತ್ತೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ