Bigg Boss 11: ಕರ್ನಾಟಕವೇ ಮೆಚ್ಚಿದ ಹನುಮಂತನ ಆಟವನ್ನು ಮನಮೆಚ್ಚಿ ಕೊಂಡಾಡಿದ ಕಿಚ್ಚ

Sampriya

ಭಾನುವಾರ, 12 ಜನವರಿ 2025 (15:14 IST)
Photo Courtesy X
ಬೆಂಗಳೂರು: ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್ 11ರ  ಫೈನಲ್‌ಗೆ ದಿನಗಣನೆ ಆರಂಭವಾಗಿದೆ. ಇನ್ನೊಂದು ವಾರವೇ ಬಾಕಿ ಇದೆ. ಈ ಮಧ್ಯೆ ಹಲವು ಸ್ಪರ್ಧಿಗಳು ಫೈನಲ್‌ಗೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ.

ಈ ವಾರ ಮುಗಿಯಿತೆಂದರೆ ಶುರುವಾಗುವುದು ಫಿನಾಲೆಯಲ್ಲಿ ಗೆದ್ದುಗೆ ಗುದ್ದಾಟ. ಇದೆಲ್ಲದರ ಮಧ್ಯೆ ಕಳೆದ ವಾರ ಅದ್ಭುತವಾಗಿ ಆಡಿದ ಹನುಮಂತುಗೆ ಫಿನಾಲೆ ಟಿಕೆಟ್ ದೊರೆತಿದೆ. ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್, ಹನುಮಂತ ಅವರ ಆಟವನ್ನು ಬಹುವಾಗಿ ಕೊಂಡಾಡಿದರು. ಕರ್ನಾಟಕವೇ ಮೆಚ್ಚುವಂತೆ ಆಡುತ್ತಿದ್ದೀರಿ ಎಂದರು.

ಈ ವಾರ ಫಿನಾಲೆ ಟಿಕೆಟ್‌ ಬಾಚಿಕೊಳ್ಳಲು ಹನುಮಂತನ ಆಟದ ವೈಖರಿಯನ್ನು ಸುದೀಪ್‌ ಹಾಡಿಹೊಗಳಿದ್ದಾರೆ. ಇತರೆ ಸ್ಪರ್ಧಿಗಳಿಗೆ ಹನುಮಂತನ ಆಟ ಹೇಗನ್ನಿಸಿತು? ಎಂಬುದನ್ನು ಸುದೀಪ್ ಕೇಳಿದ್ದಾರೆ. ಆ ವೇಳೆ, ಒಬ್ಬೊಬ್ಬರು ಒಂದೊಂದು ರೀತಿ ಹನುಮಂತನ ಆಟವನ್ನು ವಿಶ್ಲೇಷಿಸಿದರು.

ಹನುಮಂತ ಎಲ್ಲವನ್ನೂ ಬಚ್ಚಿಟ್ಟುಕೊಳ್ಳುತ್ತಾನೆ ಬಹಳ ಸ್ಮಾರ್ಟ್ ಎಂದು ಭವ್ಯಾ ಹೇಳಿದರು. ಆಗ ಸುದೀಪ್‌, ಆ ಗುಣ ನನ್ನಲ್ಲೂ ಇದೆ. ನಾನು ಸಹ ಏನೂ ಮಾತನಾಡುವುದಿಲ್ಲ, ಏನನ್ನೂ ಹೇಳುವುದಿಲ್ಲ. ನನಗೆ ಹೇಳಲು ಇಷ್ಟ ಇಲ್ಲ ಎಂದಲ್ಲ. ಹೇಳಿದರೆ ಅವರಿಗೆ ಅರ್ಥ ಆಗುವುದಿಲ್ಲ. ಬರೀ ವಾದ ನನಗೆ ಇಷ್ಟವಿಲ್ಲ. ಈ ವಿಷಯದಲ್ಲಿ ಹನುಮಂತನ ಗುಣ ನನ್ನಲ್ಲೂ ಇದೆ. ಹಾಗಿದ್ದರೆ ನಾನೂ ಸಹ ಸ್ಮಾರ್ಟ್ ಹಾ ಎಂದು ಪ್ರಶ್ನೆ ಮಾಡಿದರು.

ಹನುಮಂತ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತನ್ನ ಮುಂದಿರುವ ಗುರಿ ನೋಡುತ್ತಾನೆ. ಅದನ್ನು ಆಡಿ ಗೆಲ್ಲುತ್ತಾನೆ ಬೇರೆ ಏನೇನೋ ಲೆಕ್ಕಾಚಾರ ಹಾಕುವುದಿಲ್ಲ, ಓವರ್ ಥಿಂಕಿಂಗ್ ಮಾಡುವುದಿಲ್ಲ ಅದೇ ಅವನ ಗೆಲುವಿನ ಸೂತ್ರ ಎಂದು ಸುದೀಪ್‌  ಕೊಂಡಾಡಿದ್ದಾರೆ.

ಮೊದಲ ವಾರವೇ ಟಾಸ್ಕ್ ಆಡಲಾಗದೆ ತಲೆಸುತ್ತಿ ಬಿದ್ದು ಹೋಗಿದ್ದರು. ಈಗ ಕರ್ನಾಟಕವೇ ಮೆಚ್ಚುವಂತೆ ಹನುಮಂತ ಆಟ ಆಡುತ್ತಿದ್ದಾರೆ ಎಂದು ಸುದೀಪ್‌ ಮನಸಾರೆ ಹೊಗಳಿದರು.  

ಹನುಮಂತ ಮಾತನಾಡಿ, ನಾನೇನು ಗೆಲ್ಲಲೇಬೇಕು ಎಂದು ಆಡುವುದಿಲ್ಲ ರೀ, ನನಗೆ ಹೇಗೆ ಬರುತ್ತದೆಯೋ ಹಾಗೆ ಆಡುತ್ತೇನೆ ಎಂದಿದ್ದಾರೆ.  ಮಾತನ್ನು ಸುದೀಪ್‌ ಮೆಚ್ಚಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ