ರೋಹಿಣಿ ಸಿಂದೂರಿ ಬಯೋಪಿಕ್ ಸದ್ಯದಲ್ಲೇ ತೆರೆಗೆ
ಲಾಕ್ ಡೌನ್ ಮುಗಿದ ಬೆನ್ನಲ್ಲೇ ಚಿತ್ರ ಸೆಟ್ಟೇರಲಿದೆ. ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ರೋಹಿಣಿ ಸಿಂದೂರಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಸಾಹಿತಿ ಕೃಷ್ಣ ಸ್ವರ್ಣಸಂದ್ರ ನಿರ್ದೇಶನ ಮಾಡಲಿದ್ದಾರೆ. ಕರ್ನಾಟಕದಲ್ಲಿ ತಾವು ಕೆಲಸ ಮಾಡಿದಲ್ಲೆಡೆ ಖಡಕ್ ನಿರ್ಧಾರಗಳಿಂದ ಸುದ್ದಿಯಾಗಿರುವ ರೋಹಿಣಿ ಜೀವನಗಾಥೆ ಯುವಜನರಿಗೆ ಸ್ಪೂರ್ತಿಯಾಗಬಲ್ಲದು ಎಂಬುದು ಚಿತ್ರತಂಡದ ಉದ್ದೇಶ.