ಕಮಲ್‌ಹಾಸನ್ ಭಾರತದ ಹಫೀಜ್ ಸಯೀದ್‌ನಂತೆ: ಬಿಜೆಪಿ

ಗುರುವಾರ, 2 ನವೆಂಬರ್ 2017 (18:45 IST)
ಬಲಪಂಥೀಯ ಹಿಂದುಗಳಲ್ಲಿ ಕೂಡಾ ಉಗ್ರರಿದ್ದಾರೆ ಎನ್ನುವ ಬಹುಭಾಷಾ ನಟ ಕಮಲ್ ಹಾಸನ್‌ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಕಮಲ್ ಹಾಸನ್ ಜಾಗತಿಕ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯಿಬಾ ಸಂಘಟನೆಯ ಮುಖ್ಯಸ್ಖ ಹಫೀಜ್ ಸಯೀದ್‌ನಂತೆ ಎಂದು ವಾಗ್ದಾಳಿ ನಡೆಸಿದೆ. 
ಕಳೆದ ಒಂದು ದಶಕದಿಂದ ಇಂತಹ ಸಂಪ್ರದಾಯ ಜಾರಿಯಲ್ಲಿದೆ. ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಭಾರತೀಯ ಸಮಾಜ ಮತ್ತು ಹಿಂದು ಸಮುದಾಯವನ್ನು ಮಲೀನಗೊಳಿಸಿ ಮತಬ್ಯಾಂಕ್‌ಗಾಗಿ ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ತೊಡಗಿದೆ. ಕಾಂಗ್ರೆಸ್ ಮುಖಂಡರಾದ ಪಿ.ಚಿದಂಬರಂ ಮತ್ತು ಸುಶೀಲ್ ಕುಮಾರ್ ಶಿಂಧೆ ಸಂಸತ್ತಿನಲ್ಲಿ ದೇಶದಲ್ಲಿ ಹಿಂದು ಉಗ್ರರಿದ್ದಾರೆ ಎಂದು ಹೇಳಿದ್ದನ್ನು ಮರೆಯುಂತಿಲ್ಲ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಗುಡುಗಿದ್ದಾರೆ.
 
ಕಮಲ್ ಹಾಸನ್ ಇಂತಹ ಹೇಳಿಕೆ ನೀಡುವ ಮೂಲಕ ಪಿ.ಚಿದಂಬರಂ ಮತ್ತು ಹಫೀಜ್ ಸಯೀದ್ ಸಾಲಿಗೆ ಸೇರಿದ್ದಾರೆ, ಕಮಲ್ ಹಾಸನ್ ಪಕ್ಷ ಕಾಂಗ್ರೆಸ್‌ನ ವಿಸ್ತೃತ ಪಕ್ಷವಾಗಿದೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. 
 
ಕೇರಳದಲ್ಲಿರುವ ಎಲ್‌ಡಿಎಫ್‌ ಸರಕಾರದೊಂದಿಗೂ ಕಮಲ್‌ಹಾಸನ್ ಅವರಿಗೆ ಉತ್ತಮ ಬಾಂಧವ್ಯವಿದೆ. ಕೇರಳದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ತಮಿಳುನಾಡಿನ ಜನತೆ ಕಮಲ್‌ಹಾಸನ್ ಅವರ ಇಂತಹ ಅಗ್ಗದ ರಾಜಕಾರಣವನ್ನು ತಿರಸ್ಕರಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ