ಪರಿವರ್ತನಾ ಯಾತ್ರೆಗೆ ರಸ್ತೆಯ ಮೇಲೆ ನಿಂತು ಜನರನ್ನು ಕರೆದ ಕೇಂದ್ರ ಸಚಿವ

ಗುರುವಾರ, 2 ನವೆಂಬರ್ 2017 (15:50 IST)
ನವ ಕರ್ನಾಟಕ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಖಾಲಿ ಇದ್ದ ಖುರ್ಚಿಗಳನ್ನು ಕಂಡ ದಿಗ್ಬ್ರಮೆಗೊಂಡ ಕೇಂದ್ರ ಸಚಿವ ಪಿಯೂಷ್ ಗೋಯಲ್, ತಾವೇ ರಸ್ತೆಯಲ್ಲಿ ನಿಂತು ಜನರನ್ನು ಆಹ್ವಾನಿಸಿದ ಘಟನೆ ನಡೆಯಿತು.
ಕೇಂದ್ರ ಸಚಿವ ಪಿಯೂಷ್ ಗೋಯಲ್, ವೇದಿಕೆಯ ಮೇಲಿದ್ದ ರಾಜ್ಯದ ಬಿಜೆಪಿ ನಾಯಕರಿಗೆ ಕುರ್ಚಿಗಳು ಕಾಳಿ ಹೊಡೆಯುತ್ತಿವೆ ರಸ್ತೆಗಳ ಮೇಲೆ ಜನ ನಿಂತಿದ್ದಾರೆ ಅವರನ್ನು ಕರೆದುಕೊಂಡು ಬನ್ನಿ ಎಂದು ಮನವಿ ಮಾಡಿದರೂ ರಾಜ್ಯ ನಾಯಕರು ಕ್ಯಾರೆ ಎನ್ನಲಿಲ್ಲವಂತೆ.
 
ರಾಜ್ಯ. ಬಿಜೆಪಿ ನಾಯಕರ ವರ್ತನೆಯಿಂದ ಕೋಪಗೊಂಡ ಗೋಯಲ್, ತಾವೇ ರಸ್ತೆಗಿಳಿದು ರಸ್ತೆ ಮೇಲೆ ನಿಂತಿದ್ದ ಜನರನ್ನು ಯಾತ್ರಾ ಸಮಾವೇಶಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಆದರೆ, ಜನ ಮಾತ್ರ ಯಾತ್ರೆಯತ್ತ ಸುಳಿಯದಿರುವುದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
 
ನಂತರ ಬಿಜೆಪಿ ಮುಖಂಡರಾದ ಸುರೇಶ್ ಕುಮಾರ್, ಅಶ್ವಥ್ಧ ನಾರಾಯಣ್, ಸಿ.ಟಿ.ರವಿ ಕೂಡಾ ರಸ್ತೆಗೆ ಬಂದು ಓಡಾಡಿ ಜನರನ್ನು ಕಾರ್ಯಕ್ರಮಕ್ಕೆ ತೆರಳುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ