ಬಹುಮತ ಬರುವವರೆಗೆ ಬಿಎಸ್‌ವೈ ಸಿಎಂ ಅಭ್ಯರ್ಥಿ, ನಂತ್ರ,,,ಹೆಗಡೆಯಂತೆ..!

ಗುರುವಾರ, 2 ನವೆಂಬರ್ 2017 (17:16 IST)
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರುವವರೆಗೆ ಮಾತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾ? ನಂತರ ಸಿಎಂ ಸ್ಥಾನ ಅನಂತಕುಮಾರ್ ಹೆಗಡೆಯವರ ಪಾಲಾಗಲಿದೆಯೇ ಎನ್ನುವ ಅನುಮಾನ ಬೆಳವಣಿಗಗಳು ನೋಡಿದಲ್ಲಿ ಇದೀಗ ಕಾಡಲು ಆರಂಭಿಸಿದೆ.
ಕಟ್ಟರ್ ಹಿಂದುತ್ವವಾದಿ ನಾಯಕರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪರಿವರ್ತನಾ ಯಾತ್ರೆಗೆ ಆಗಮಿಸುತ್ತಿರುವಂತೆಯೇ ಸಿಎಂ ಅಭ್ಯರ್ಥಿಗೆ ದೊರೆಯಬೇಕಾದ ಗೌರವ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
 
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಸಿಎಂ ಸ್ಥಾನ ದೊರೆಯುವುದು ಖಚಿತ ಎಂದು ಬಿಜೆಪಿಯ ಅಂತರಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದು ಮೂಲಗಳು ತಿಳಿಸಿವೆ.  
 
ಆದಾಗ್ಯೂ, ಬಿಜೆಪಿ ಮುಖಂಡರು ಊಹಾಪೋಹಗಳನ್ನು ತಿರಸ್ಕರಿಸಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ