ಪತ್ನಿ ಜೊತೆ ಬಾಲಿವುಡ್ ನಟನ ಸೋಷಿಯಲ್ ಡಿಸ್ಟನ್ಸ್?

ಶನಿವಾರ, 12 ಡಿಸೆಂಬರ್ 2020 (15:12 IST)
ಬಾಲಿವುಡ್ ನಟ ಮದುವೆಯಾಗಿ ಐದು ವರ್ಷಳಾಗಿದ್ದರೂ ಇದೀಗ ತಮ್ಮಿಂದ ಸೋಷಿಯಲ್ ಡಿಸ್ಟನ್ಸ್ ಮೆಂಟೈನ್ ಮಾಡುತ್ತಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ತಮ್ಮ ಮದುವೆಯ ಐದು ವರ್ಷಗಳನ್ನು ಪೂರೈಸಿದ ನಂತರವೂ ಸದಾ ಸುದ್ದಿಯಲ್ಲಿದ್ದಾರೆ.

ಮೀರಾ ತನ್ನ ಪತಿ ಶಾಹಿದ್ ಕಪೂರ್ ಬಗೆಗಿನ ಎರಡು ಆಸಕ್ತಿದಾಯಕ ಇನ್ಸ್ಟಾಗ್ರಾಮ್ ಕಥೆಗಳನ್ನು ಹಂಚಿಕೊಂಡಿದ್ದಾರೆ.

ಎರಡೂ ಚಿತ್ರಗಳಲ್ಲಿ, ಶಾಹಿದ್ ಅವರು ಫೋನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೆಂಡತಿಯ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಈ ಫೋಟೊಗಳನ್ನು ಶೇರ್ ಮಾಡಿರುವ ಮೀರಾ ತಮ್ಮ ಪತಿ ಸೋಷಿಯಲ್ ಡಿಸ್ಟನ್ಸ್ ನಲ್ಲಿದ್ದಾರೆ ಎಂದು ಫನ್ನಿಯಾಗಿ ತಿಳಿಸಿದ್ದಾರೆ.

ಸದ್ಯ ಶಾಹಿದ್ ಅವರು ತಮ್ಮ ಮುಂಬರುವ ಚಿತ್ರ ‘ಜರ್ಸಿ’ ಚಿತ್ರದ ಚಿತ್ರೀಕರಣದಿಂದ ಹಿಂದಿರುಗಿದ ನಂತರ ಸಾಮಾಜಿಕ ದೂರವನ್ನು ಉಳಿಸಿಕೊಂಡಿದ್ದಾರೆ. ಚಿತ್ರೀಕರಣದ ಅಂತಿಮ ಹಂತಕ್ಕಾಗಿ ಅವರು ಚಂಡೀಗಢದಲ್ಲಿ ಶೂಟಿಂಗ್‌ನಲ್ಲಿದ್ದರು ಎಂದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ