ವೇಶ್ಯೆ ಪಾತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್

ಬುಧವಾರ, 23 ಸೆಪ್ಟಂಬರ್ 2020 (13:06 IST)
ಬಾಲಿವುಡ್ ನಟಿ ಆಲಿಯಾ ಭಟ್ ಅವರು ತಮ್ಮ ಮುಂದಿನ ಚಿತ್ರದಲ್ಲಿ ವೈಶ್ಯಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಬಂದಿದೆ.

ಸಂಜಯ್ ಲೀಲಾ ಭನ್ಸಾಲಿ ಅವರ ‘ಗಂಗುಬಾಯಿ ಕಥಿಯಾವಾಡಿ’ಚಿತ್ರದ ಚಿತ್ರೀಕರಣವನ್ನು ಅಕ್ಟೋಬರ್‌ನಿಂದ ಪುನರಾರಂಭಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ನಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು.

ಆಲಿಯಾ ಭಟ್‌ ರ ದೃಶ್ಯಗಳನ್ನು ಮತ್ತು ಕಡಿಮೆ ಜನರು ಅಗತ್ಯವಿರುವ ಇತರ ದೃಶ್ಯಗಳನ್ನು ಚಿತ್ರೀಕರಿಸಲಿದೆ. ಕೆಲವು ಚೀಟ್ ಶಾಟ್‌ಗಳನ್ನು ಬಳಸಿಕೊಳ್ಳಲಾಗುವುದು, ನಂತರ ವಿಎಫ್‌ಎಕ್ಸ್ ಹಂತದಲ್ಲಿ ಅದನ್ನು ಸರಿಪಡಿಸಲಾಗುತ್ತದೆ ಎನ್ನಲಾಗಿದೆ.

60 ರ ದಶಕದ ಕಾಮಾಟಿಪುರ ವೇಶ್ಯಾಗೃಹಗಳನ್ನು ಮರುಸೃಷ್ಟಿಸಿರುವ ಚಿತ್ರದ ಗ್ರ್ಯಾಂಡ್ ಸೆಟ್ ಅನ್ನು ಮಳೆಗಾಲಕ್ಕೆ ಮುಂಚಿತವಾಗಿ ಸಿದ್ಧಪಡಿಸಲಾಗಿದೆ. ಪ್ರಸ್ತುತ, ಸೆಟ್ ನ ಸಂಬಂಧಿತ ಭಾಗಗಳು ಮಾತ್ರ ಫಿಲ್ಮ್ ಸ್ಟುಡಿಯೋದಲ್ಲಿ ನಿಂತಿವೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ