ಪುನೀತ್ ನಿವಾಸಕ್ಕೆ ಭೇಟಿ ಕೊಟ್ಟ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಮತ್ತು ಅಲಿ

ಸೋಮವಾರ, 11 ಏಪ್ರಿಲ್ 2022 (10:51 IST)
ಬೆಂಗಳೂರು: ತೆಲುಗಿನ ಖ್ಯಾತ ಹಾಸ್ಯ ಕಲಾವಿದರಾದ ಬ್ರಹ್ಮಾನಂದಂ ಮತ್ತು ಅಲಿ ಪವರ್ ‍ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಪುನೀತ್ ನಿಧನದ ಬಳಿಕ ಅನೇಕ ಗಣ್ಯರು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಆ ಪಟ್ಟಿಗೆ ಈಗ ಬ್ರಹ್ಮಾನಂದಂ ಮತ್ತು ಅಲಿ ಕೂಡಾ ಸೇರಿದ್ದಾರೆ.

ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಯುವರಾಜ್ ಕುಮಾರ್ ಅವರನ್ನು ಬರಮಾಡಿಕೊಂಡರು. ಬಳಿಕ ಬ್ರಹ್ಮಾನಂದಂ ಮತ್ತು ಅಲಿ ಪುನೀತ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ