ಆರ್ಥಿಕ ಬಿಕ್ಕಟ್ಟು : ಒಂದೇ ದಿನಕ್ಕೆ ಹಣಕಾಸು ಸಚಿವ ರಾಜೀನಾಮೆ
ದೇಶದ ಹಣಕಾಸು ಸಚಿವರಾಗಿ ಅಲಿ ಸಬ್ರಿ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ದೇಶಾದ್ಯಂತ ಹೆಚ್ಚಿರುವ ಜನಾಕ್ರೋಶದಿಂದಾಗಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ನಾನು ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.