ತಲ್ವಾರ್ ನಿಂದ ಕೇಕ್ ಕಟ್ ; ನಟ ದುನಿಯಾ ವಿಜಯ್ ವಿರುದ್ಧ ಎಫ್ ಐ ಆರ್

ಸೋಮವಾರ, 20 ಜನವರಿ 2020 (19:37 IST)
ನಟ ದುನಿಯಾ ವಿಜಯ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ದುನಿಯಾ ವಿಜಿ ವಿರುದ್ಧ ಕೇಸ್ ದಾಖಲಾಗಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಜನ್ಮದಿನಾಚರಣೆ ಸಂದರ್ಭದಲ್ಲಿ ಕೇಕ್ ಕಟ್ ಮಾಡೋವಾಗ ವಿಜಿ ತಲ್ವಾರ್ ಬಳಸಿ ಕೇಕ್ ಕತ್ತರಿಸಿದ್ದಾರೆ. ಇದಕ್ಕಾಗಿ ಗಿರಿನಗರ ಠಾಣೆ ಪೊಲೀಸರು, ಬಹಿರಂಗವಾಗಿ ತಲ್ವಾರ್ ಉಪಯೋಗಿಸಿದ ಕಾರಣಕ್ಕಾಗಿ ವಿಜಯ್ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ.

ಕೇಕ್ ನ್ನು ತಲ್ವಾರ್ ಬಳಸಿ ಸಾರ್ವಜನಿಕವಾಗಿ ಉಪಯೋಗ ಮಾಡಿರೋದಕ್ಕೆ ಪೊಲೀಸರು ದುನಿಯಾ ವಿಜಿಗೆ ನೋಟಿಸ್ ನೀಡಿದ್ದಾರೆ.

ನಟ ವಿಜಯ್ ವಿವರಣೆ ನೀಡಿದ ನಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದು, ಇದು ದುನಿಯಾ ವಿಜಿಗೆ ಮತ್ತೊಂದು ಕಷ್ಟತರಲಿದೆ ಎನ್ನಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ