ಸಿಎಂ ಬಳಿಕ ಅದೇ ಕಾರಣಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ಜಯಮಾಲ, ಶ್ರುತಿ, ಮಾಳವಿಕಾ

Krishnaveni K

ಶನಿವಾರ, 6 ಸೆಪ್ಟಂಬರ್ 2025 (11:50 IST)
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟರಾದ ಜಯಮಾಲ, ಶ್ರುತಿ ಕೃಷ್ಣ ಮತ್ತು ಮಾಳವಿಕಾ ಅವಿನಾಶ್ ಇಂದು ಬೆಳ್ಳಂ ಬೆಳಿಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದ ಈ ಹೀರೋಯಿನ್ಸ್ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದೆ ಇರುವ ಕಾರಣ ಒಂದೇ. ಅದು ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂಬುದಾಗಿದೆ.

ಇದೇ ಸೆಪ್ಟೆಂಬರ್ 18 ಡಾ ವಿಷ್ಣುವರ್ಧನ್ ಗೆ 75 ನೇ ಜನ್ಮ ಜಯಂತಿಯಾಗಿದೆ. ಚಿತ್ರರಂಗದಲ್ಲಿ 200 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ ಕನ್ನಡಿಗ ಮನಸ್ಸಿನಲ್ಲಿ ಎಂದೆಂದಿಗೂ ಅಜರಾಮರಾಗಿರುವ ಸಾಹಸಸಿಂಹನಿಗೆ ಕರ್ನಾಟಕ ರತ್ನ ನೀಡಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿದೆ.

ಮೊನ್ನೆಯಷ್ಟೇ ವಿಷ್ಣು ಪತ್ನಿ ಭಾರತಿ, ಅಳಿಯ ಅನಿರುದ್ಧ ಜತಕರ ಸಿಎಂ ಭೇಟಿಯಾಗಿ ಕರ್ನಾಟಕ ರತ್ನ ನೀಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಮೊದಲು ಜಯಮಾಲ, ಶ್ರುತಿ, ಮಾಳವಿಕಾ ಸಿಎಂ ಭೇಟಿಯಾಗಿ ಕರ್ನಾಟಕ ರತ್ನ ನೀಡುವಂತೆ ಮನವಿ ಸಲ್ಲಿಸಿದ್ದರು. ಇಂದು ಇದೇ ನಟಿಯರು ಡಿಸಿಎಂ ಭೇಟಿಯಾಗಿ ಅದೇ ಬೇಡಿಕೆಯಿಟ್ಟಿದ್ದಾರೆ. ಈ ಬಾರಿ ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಕರ್ನಾಟಕ ರತ್ನ ಬಿರುದು ಉಡುಗೊರೆಯಾಗಿ ಸಿಗಬಹುದು ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ