ಸೈಮಾ 2025: ಕಿಚ್ಚ ಸುದೀಪ್ ಬೆಸ್ಟ್ ಆಕ್ಟರ್, ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ

Krishnaveni K

ಶನಿವಾರ, 6 ಸೆಪ್ಟಂಬರ್ 2025 (09:29 IST)
ಬೆಂಗಳೂರು: 2025 ನೇ ಸಾಲಿನ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮ ದುಬೈನಲ್ಲಿ ನಡೆದಿದ್ದ ಮ್ಯಾಕ್ಸ್ ಸಿನಿಮಾದಲ್ಲಿನ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಉಳಿದಂತೆ ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ.

ದುಬೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ವಿಜೇತರನ್ನು ಘೋಷಿಸಿ ಪ್ರಶಸ್ತಿ ವಿತರಿಸಲಾಯಿತು. ಆದರೆ ನಟ ಸುದೀಪ್ ಕಾರಣಾಂತರಗಳಿಂದ ಭಾಗಿಯಾಗಿರಲಿಲಲ್ಲ. ರಿಯಲ್ ಸ್ಟಾರ್ ಉಪೇಂದ್ರ ಯುಐ ಸಿನಿಮಾದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ.

ಉಳಿದಂತೆ ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ.
ಅತ್ಯುತ್ತಮ ನಟ: ಕಿಚ್ಚ ಸುದೀಪ್
ಅತ್ಯುತ್ತಮ ನಿರ್ದೇಶಕ: ಉಪೇಂದ್ರ
ಅತ್ಯುತ್ತಮ ಸಂಗೀತ ನಿರ್ದೇಶಕ: ಅಜನೀಶ್ ಬಿ ಲೋಕನಾಥ್ (ಮ್ಯಾಕ್ಸ್)
ಅತ್ಯುತ್ತಮ ಹಾಸ್ಯ ನಟ: ಜಾಕ್ ಸಿಂಗಂ (ಭೀಮ)
ಅತ್ಯುತ್ತಮ ಚೊಚ್ಚಲ ನಟ: ಸಮರ್ಜಿತ್ ಲಂಕೇಶ್ (ಗೌರಿ)
ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಸಂದೀಪ್ ಸುಂಕದ್ (ಶಾಖಾಹಾರಿ)
ಭರವಸೆ ಮೂಡಿಸಿದ ನಟಿ: ಸಾನ್ಯಾ ಅಯ್ಯರ್ (ಗೌರಿ)
ಅತ್ತುತ್ತಮ ಚೊಚ್ಚಲ ನಟಿ: ಅಂಕಿತಾ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಸಾಂಗ್ ಡಿಸೈನ್: ಇಮ್ರಾನ್ ಎಸ್ ಸರ್ದಾರಿಯಾ
ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಹಿನ್ನಲೆ ಗಾಯಕಿ: ಐಶ್ವರ್ಯ ರಂಗರಾಜನ್
ಅತ್ಯುತ್ತಮ ಗೀತರಚನೆ: ವಿ ನಾಗೇಂದ್ರ ಪ್ರಸಾದ್
ಅತ್ಯುತ್ತಮ ಗಾಯಕ: ಜಸ್ಕರನ್
ನಟನೆಗೆ ವಿಮರ್ಶಕರ ಪ್ರಶಸ್ತಿ: ದುನಿಯಾ ವಿಜಯ್ (ಭೀಮ)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ