ಕಾವೇರಿ ಹೋರಾಟಕ್ಕಿಳಿದ ದರ್ಶನ್: ನಟರನ್ನು ಟಾರ್ಗೆಟ್ ಮಾಡುತ್ತಿರುವುದಕ್ಕೆ ಟಾಂಗ್
ಮಂಡ್ಯದಲ್ಲಿ ಕಾವೇರಿ ಹೋರಾಟಗಾರರ ಜೊತೆ ಹಸಿರು ಶಾಲು ಹೊದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ನಟ ದರ್ಶನ್ ಕಾವೇರಿ ವಿಚಾರಕ್ಕೆ ಬಂದರೆ ಕಲಾವಿದರನ್ನು ಟಾರ್ಗೆಟ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ.
ಕಾವೇರಿ ಹೋರಾಟಕ್ಕೆ ನಟರು ಬರುತ್ತಿಲ್ಲ ಎನ್ನುವವರ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ ಹೀಗೆ ನಾವು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ಮೊನ್ನೆಯಷ್ಟೇ ಕನ್ನಡಕ್ಕೆ ಬಂದ ತಮಿಳು ಸಿನಿಮಾ ಕರ್ನಾಟಕದಲ್ಲಿ 36 ಕೋಟಿ ಬಾಚಿಕೊಂಡು ಹೋಯ್ತಲ್ಲಾ, ಅದನ್ನು ಇಲ್ಲಿ ವಿತರಣೆ ಮಾಡಿದವರು ಕಣ್ಣಿಗೆ ಕಾಣಲ್ವಾ? ಅವರನ್ನೂ ಯಾಕೆ ನೀವು ಕೇಳಲ್ಲ? ಎಂದಿದ್ದಾರೆ.