ಕಾವೇರಿ ವಿವಾದಕ್ಕೆ ಎಂಟ್ರಿ ಕೊಟ್ಟ ಚಿತ್ರರಂಗ

ಗುರುವಾರ, 21 ಸೆಪ್ಟಂಬರ್ 2023 (09:20 IST)
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಈಗ ಚಿತ್ರರಂಗವೂ ಬೆಂಬಲ ಕೊಟ್ಟಿದೆ.

ಸ್ಟಾರ್ ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕ ನಮ್ಮ ರೈತರಿಗೆ ಅನ್ಯಾಯವಾಗದಂತೆ ಕಾವೇರಿ ನದಿ ವಿವಾದ ಬಗೆ ಹರಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಾವೇರಿ ನಮ್ಮದು. ನಮ್ಮ ರೈತರಿಗೆ ಅನ್ಯಾಯವಾಗದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ನಟರಾದ ಕಿಚ್ಚ ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಅನಂತ್ ನಾಗ್, ಉಪೇಂದ್ರ ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್, ದುನಿಯಾ ವಿಜಿ, ರಿಷಬ್ ಶೆಟ್ಟಿ, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಧ್ವನಿಯೆತ್ತಿದ್ದಾರೆ. ಈ ಹಿಂದೆಯೂ ಕಾವೇರಿ ವಿವಾದವಾದಾಗಲೆಲ್ಲಾ ಚಿತ್ರರಂಗ ರೈತರ ಪರವಾಗಿ ಪ್ರತಿಭಟನೆಗಳಲ್ಲಿ ಭಾಗಿಯಾಗಿತ್ತು. ಈ ಬಾರಿಯೂ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ