ಪ್ರೇಮ್, ಮಾಲಾಶ್ರೀ ಪುತ್ರಿ ಬಳಿಕ ದುನಿಯಾ ವಿಜಿ ಪುತ್ರಿಯರ ಸಿನಿ ಪ್ರವೇಶ

ಸೋಮವಾರ, 25 ಸೆಪ್ಟಂಬರ್ 2023 (08:40 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಟ್ರೆಂಡ್ ಶುರುವಾಗಿದೆ.

ನೆನಪಿರಲಿ ಪ್ರೇಮ್ ಪುತ್ರಿ ಟಗರು ಪಲ್ಯ ಸಿನಿಮಾಗೆ ನಾಯಕಿಯಾಗಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧನಾ ಮೊದಲ ಸಿನಿಮಾದಲ್ಲೇ ಡಿ ಬಾಸ್ ದರ್ಶನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದೀಗ ದುನಿಯಾ ವಿಜಯ್ ಪುತ್ರಿಯರೂ ಸಿನಿಮಾಗೆ ಕಾಲಿಡುತ್ತಿರುವ ಸುದ್ದಿ ಕೇಳಿಬಂದಿದೆ. ವಿಜಿ ಹಿರಿಯ ಪುತ್ರಿ ಮೋನಿಕಾ ಮುಂಬೈನಲ್ಲಿ ಆಕ್ಟಿಂಗ್ ಕೋರ್ಸ್ ಮುಗಿಸಿ ಬಂದಿದ್ದು, ಆಕೆಯನ್ನು ಸ್ವತಃ ವಿಜಯ್ ಚಿತ್ರರಂಗಕ್ಕೆ ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಅದಾದ ಬಳಿಕ ಕಿರಿಯ ಪುತ್ರಿ ಮೋನಿಷಾಳನ್ನೂ ಚಿತ್ರರಂಗಕ್ಕೆ ಕರೆತರುವ ಯೋಜನೆ ಅವರಿಗಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ