ಭಾರತಕ್ಕೆ ಐತಿಹಾಸಿಕ ಕ್ಷಣ: ಆಸ್ಕರ್ ಗೆದ್ದ ನಾಟ್ಟು ನಾಟ್ಟು

ಸೋಮವಾರ, 13 ಮಾರ್ಚ್ 2023 (08:36 IST)
Photo Courtesy: Twitter
ಲಾಸ್ ಏಂಜಲೀಸ್: ಭಾರತದ ಸಿನಿಮಾ ಇತಿಹಾಸದಲ್ಲಿ ಇಂದು ಸ್ಮರಣೀಯ ಕ್ಷಣವಾಗಿ ಉಳಿಯಲಿದೆ. ಎಲ್ಲರ ನಿರೀಕ್ಷೆಯಂತೇ ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ.

ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ರಾಜಮೌಳಿ ನಿರ್ದೇಶನ, ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ನಾಟ್ಟು ನಾಟ್ಟು ಹಾಡು ಪ್ರಶಸ್ತಿ ಪಡೆದುಕೊಂಡಿದೆ.

ಈ ಮೂಲಕ ಅಪ್ಪಟ ಭಾರತೀಯ ಸಿನಿಮಾವೊಂದು ಇದೇ ಮೊದಲ ಬಾರಿಗೆ ಆಸ್ಕರ್ ಗೆದ್ದ ಸಾಧನೆ ಮಾಡಿದೆ. ಇದರ ಜೊತೆಗೆ ಭಾರತದ ಡಾಕ್ಯುಮೆಂಟರಿ ಸಿನಿಮಾ ದಿ ಎಲಿಫೆಂಟ್ ವಿಸ್ಪರ್ಸ್ ಕೂಡಾ ಅತ್ಯುತ್ತಮ ಡಾಕ್ಯುಮೆಂಟರಿ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.

ಇದಕ್ಕೆ ಮೊದಲು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿರುವ ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ವೇದಿಕೆಯಲ್ಲಿ ನಾಟ್ಟು ನಾಟ್ಟು ಹಾಡನ್ನು ಪ್ರಸ್ತುತಪಡಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ