ಪಾತ್ರೆ ತೊಳೆದ ಕತ್ರಿನಾ ಕೈಫ್, ನೀರು ಸೇದಿದ ಶುಭಾ ಪೂಂಜ: ಎಲ್ಲಾ ಕೊರೋನಾ ಮಹಿಮೆ!

ಬುಧವಾರ, 25 ಮಾರ್ಚ್ 2020 (09:08 IST)
ಬೆಂಗಳೂರು: ಕೊರೋನಾವೈರಸ್ ಎಂಬ ಮಹಾಮಾರಿ ರೋಗ ಜನರನ್ನು ಬೇಡಿಯಿಲ್ಲದೇ ಕಟ್ಟಿ ಹಾಕಿದೆ ಎಂದರೆ ತಪ್ಪಲ್ಲ. ಮನೆಯಲ್ಲೇ ಕೂತಿರುವ ಸೆಲೆಬ್ರಿಟಿಗಳು ಇದುವರೆಗೆ ಮಾಡದ ಕೆಲಸವನ್ನು ಮಾಡುತ್ತಿದ್ದಾರೆ.


ಬಾಲಿವುಡ್ ನಲ್ಲಿ ಅತ್ಯಧಿಕ ಸಂಭಾವನೆ ಪಡೆವ ನಟಿಯರ ಪೈಕಿ ಒಬ್ಬರಾಗಿರುವ ಕತ್ರಿನಾ ಕೈಫ್ ಈಗ ಅಡುಗೆ ಮನೆಯಲ್ಲಿ ಪಾತ್ರೆ ತೊಳೆದು ಟೈಂ ಪಾಸ್ ಮಾಡುತ್ತಿದ್ದಾರೆ! ಕರೀನಾ ಕಪೂರ್ ಸಿಕ್ಕ ಅವಕಾಶದಲ್ಲಿ ಅಡುಗೆ ಪ್ರಯೋಗ ಮಾಡುತ್ತಿದ್ದಾರೆ. ಬಹುಶಃ ಇವರಿಗೆಲ್ಲಾ ಇದುವರೆಗೆ ಅಡುಗೆ ಮನೆ ಕಡೆ ಸುಳಿಯಲೂ ಪುರುಸೊತ್ತಿದ್ದಿರಲಿಕ್ಕಿಲ್ಲ.

ಇನ್ನು ಕನ್ನಡ ನಟ-ನಟಿಯರೂ ಕಮ್ಮಿಯೇನಲ್ಲ. ನಟಿ ಶುಭಾ ಪೂಂಜ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುವಿನ ದಿನದ ದಿನಚರಿಯನ್ನು ಬರೆದುಕೊಂಡಿದ್ದು, ಬಾವಿಯಿಂದ ನೀರು ಸೇದಿ ಗಿಡಗಳಿಗೆ ಹಾಕುತ್ತಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ. ಇನ್ನು, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಮೇಘನಾ ಸರ್ಜಾ ತಮ್ಮ ಮನೆಯವರ ಜತೆ ಕೂತು ಲೂಡೋ ಆಡುತ್ತಿರುವ ವಿಡಿಯೋವನ್ನು ಪ್ರಕಟಿಸಿದ್ದರು. ಅಂತೂ ಕೊರೋನಾ ತಾರೆಯರನ್ನೂ ಚೆನ್ನಾಗಿಯೇ ಆಟವಾಡಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ