ರಿಷಬ್ ಶೆಟ್ಟಿ ಬಳಿಕ ರಾಕಿಂಗ್ ಸ್ಟಾರ್ ಯಶ್ ಕೂಡಾ ಈಗ ಬೇಬಿ ಸಿಟ್ಟರ್!

ಮಂಗಳವಾರ, 24 ಮಾರ್ಚ್ 2020 (10:01 IST)
ಬೆಂಗಳೂರು: ಕೊರೋನಾವೈರಸ್ ಸ್ಟಾರ್ ನಟರನ್ನು ಮನೆಯಲ್ಲೇ ಕಟ್ಟಿಹಾಕಿದೆ. ಸದಾ ಚಿತ್ರೀಕರಣವೆಂದು ಓಡಾಡುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಕೂಡಾ ಈಗ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ಇರುವಂತೆ ಮಾಡಿದೆ!


ಮೊನ್ನೆಯಷ್ಟೇ ರಿಷಬ್ ಶೆಟ್ಟಿ ತಮ್ಮ ಮನೆಯಲ್ಲೇ ಕೂತಿರುವಾಗ ತಮ್ಮ ಮಗನಿಗೆ ಎಣ್ಣೆ ಸ್ನಾನ ಮಾಡಿಸುವ ಫೋಟೋ ಹಾಕಿ ವರ್ಕ್ ಫ್ರಂ ಹೋಂ ಎಂದರೆ ಇದೇ ಎಂದಿದ್ದರು.

ಇದೀಗ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳು ಐರಾಗೆ ಊಟ ತಿನಿಸುವ ಕೆಲಸ ಮಾಡುತ್ತಿರುವ ವಿಡಿಯೋ ಪ್ರಕಟಿಸಿದ್ದಾರೆ. ಆದರೆ ಅಸಲಿಗೆ ಐರಾಗೆ ತಂದ ಊಟವನ್ನು ಅವಳು ತನ್ನ ತಂದೆಗೇ ಮೈ ತುಂಬಾ ಚೆಲ್ಲಿಕೊಂಡು ತಿನಿಸುತ್ತಿದ್ದಾಳೆ. ಈ ಫನ್ನಿ ವಿಡಿಯೋವನ್ನು ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಸಾಕಷ್ಟು ಲೈಕ್ಸ್, ಕಾಮೆಂಟ್ ಬಂದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ