ಪವಿತ್ರಾ ಲೋಕೇಶ್ ಮರುಮದುವೆ ಸುದ್ದಿ! ತೆಲುಗು ನಟನ ಕೈ ಹಿಡಿದರಾ ಸ್ಯಾಂಡಲ್ ವುಡ್ ನಟಿ?
ತೆಲುಗು ನಟ ನರೇಶ್ ಜೊತೆ ಪವಿತ್ರಾ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ನಟ ನರೇಶ್ ಗೆ ಇದು ನಾಲ್ಕನೇ ಮದುವೆ ಎಂಬ ಸುದ್ದಿಯಿದೆ. ನರೇಶ್ ಜೊತೆ ಪವಿತ್ರಾ ಕೆಲವು ಟಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇದೇ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಈಗ ಸಂಚಲನ ಮೂಡಿಸುತ್ತಿದೆ.
ಗಮನಿಸಬೇಕಾದ ಅಂಶವೆಂದರೆ ಪವಿತ್ರಾ ಲೋಕೇಶ್ ಸ್ಯಾಂಡಲ್ ವುಡ್ ನಟ ಸುಚೇಂದ್ರ ಪ್ರಸಾದ್ ಪತ್ನಿ ಕೂಡಾ. ಇಬ್ಬರಿಗೆ ಈಗಾಗಲೇ ಒಂದು ಮಗುವೂ ಇದೆ. ಅತ್ತ ನರೇಶ್ ಗೂ ಓರ್ವ ಪುತ್ರನಿದ್ದಾನೆ. ಈ ಸುದ್ದಿ ಹಬ್ಬಿದ ಬಳಿಕ ಸುಚೇಂದ್ರ ಪ್ರಸಾದ್ ಮತ್ತು ಪವಿತ್ರಾ ಲೋಕೇಶ್ ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿಲ್ಲ ಎಂಬ ಗುಸು ಗುಸು ಕೇಳಿಬಂದಿದೆ. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆ ನೀಡಿಲ್ಲ.