ಜೈಲರ್ ಸಿನಿಮಾದಲ್ಲಿ ಶಿವಣ್ಣ-ರಜನಿ ದೃಶ್ಯಕ್ಕೇ ಕತ್ತರಿ ಹಾಕಿದ್ಯಾ ಸೆನ್ಸಾರ್ ಮಂಡಳಿ?!
ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ನಡೆಸಿದೆ. ಈ ಪೈಕಿ ರಜನಿ-ಶಿವಣ್ಣ ಕಾಂಬಿನೇಷನ್ ನ ದೃಶ್ಯವೂ ಸೇರಿದೆ ಎನ್ನಲಾಗುತ್ತಿದೆ. ಹಾಗೊಂದು ವೇಳೆ ಇಬ್ಬರ ದೃಶ್ಯಕ್ಕೆ ಕಟ್ ಮಾಡಿದರೆ ಅದು ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಲಿದೆ.
ಆಗಸ್ಟ್ 10 ಕ್ಕೆ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಶಿವಣ್ಣ ಈ ಸಿನಿಮಾದಲ್ಲಿ 10 ನಿಮಿಷದ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅಲ್ಲೂ ಕಟ್ ಮಾಡಲು ಹೇಳಿರುವುದರಿಂದ ಅವರು ಎಷ್ಟು ಹೊತ್ತು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗದು.