ರೆಬಲ್ ಸ್ಟಾರ್ ಅಂಬರೀಶ್ ಪುತ್ರನಿಗೆ ನೆರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬುಧವಾರ, 9 ಜನವರಿ 2019 (09:36 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ರನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಅಂಬರೀಶ್ ಮೇಲಿನ ಪ್ರೀತಿಯ ಋಣಸಂದಾಯ ಮಾಡಲು ಹೊರಟಿದ್ದಾರೆ.


ಅಂಬರೀಶ್ ಪುತ್ರ ಅಭಿಷೇಕ್ ಅಭಿನಯಿಸುತ್ತಿರುವ ‘ಅಮರ್’ ಚಿತ್ರದ ಚಿತ್ರೀಕರಣ ಸಾಗುತ್ತಿದ್ದು,  ಈ ಚಿತ್ರಕ್ಕೆ ಇದೀಗ ದರ್ಶನ್ ಸಾಥ್ ನೀಡಿದ್ದಾರೆ. ಅಭಿಷೇಕ್ ಚೊಚ್ಚಲ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಪಕ್ಕಾ ಆಗಿದೆ.

ಈಗಾಗಲೇ ಅಮರ್ ಚಿತ್ರಕ್ಕೆ ಸ್ಟಾರ್ ನಟರು ಸಾಥ್ ನೀಡಲಿದ್ದಾರೆ ಎಂಬ ಸುದ್ದಿಯಿತ್ತು. ಈಗ ದರ್ಶನ್ ‘ಅಪ್ಪಾಜಿ’ ಅಂಬರೀಶ್ ಪುತ್ರನ ಸಾಥ್ ಗೆ ನಿಲ್ಲುತ್ತಿರುವುದು ಪಕ್ಕಾ ಆಗಿದೆ. ಈಗಾಗಲೇ ದರ್ಶನ್ ಭಾಗದ ಚಿತ್ರೀಕರಣ ಆರಂಭವಾಗಿದೆ. ಇನ್ನು, ಯಾರೆಲ್ಲಾ ಸ್ಟಾರ್ ನಟರು ಈ ಚಿತ್ರದಲ್ಲಿ ಬಂದು ಹೋಗುತ್ತಾರೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ